Dharawada | ಹತ್ತಿ ಬೆಳೆಗೆ ಕಳ್ಳರ ಕನ್ನಾ….ಕಳ್ಳರ ಕೃತ್ಯಕ್ಕೆ ಬೆಚ್ಚಿಬಿದ್ದ ಅನ್ನದಾತ…..

ಧಾರವಾಡ : ಇಷ್ಟುದಿನ ಮನೆ ಮಠ, ಬ್ಯಾಂಕ ಎಟಿಎಂ ಸೇರಿದಂತೆ ದೇವಸ್ಥಾನಗಳ ಹಿಂಡಿಗಳಿಗೆ ಕನ್ನಾ ಹಾಕುತ್ತಿದ್ದ ಕಳ್ಳರು ಈಗ ರೈತರ ಹತ್ತಿ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ. ಕಳ್ಳರ ಗ್ಯಾಂಗ್ಯೊಂದು ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮೈಲಾರಪ್ಪ ಕುರಗುಂದ ಅವರ ಜಮೀನಿನಲ್ಲಿ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಇನ್ನೂ ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಮಲ್ಲಪ್ಪನಿಗೆ ಹೊಲದಲ್ಲಿನ ಹತ್ತಿ ಇಲ್ಲದನ್ನು ನೋಡಿ ಶಾಕ್ ಆಗಿದ್ದಾರೆ.
ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬೀಡಿಬೇಕಾಗಿತ್ತು. ಮನೆಯಲ್ಲಿ ಕೆಲಸ ಕಾರ್ಯಗಳಿಂದ ಹಾಗೂ ಆಳಿನ ಸಮಸ್ಯೆಯಿಂದ ಹಾಗೇ ಬಿಟ್ಟಿದ, ಆದರೆ ಹತ್ತಿ ಬೆಳೆ ಈಗ ರೈತನ ಕೈ ತಪ್ಪಿ ಕಳ್ಳರ ಪಾಲಾಗಿದೆ. ಖದೀಮ ಕಳ್ಳರ ಈ ಕೃತ್ಯದಿಂದ ಬ್ಯಾಲ್ಯಾಳ ಗ್ರಾಮದ ರೈತರ ಬೆಚ್ಚಿಬಿದಿದ್ದಾರೆ. ಇಷ್ಟು ದಿನದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಫಸಲು ಕಳ್ಳತನಾವಾಗಿದ್ದು, ಅಟೋ ರಿಕ್ಷಾ ತಂದು ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. 4ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನವಾಗಿದರ. ಹೀಗಾದ್ದರೆ ನಾವು ಬೆಳೆ ಬೆಳೆಯುವುದ್ದಾರು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಳ್ಳರನ್ನು ಪೊಲೀಸ್ ಇಲಾಖೆಯವರು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.




