#Exclusive Newsಜಿಲ್ಲೆಸುದ್ದಿ

ಅ.18ರಂದು ವಿಧಾನಸೌಧದ ಎದುರು ಧರಣಿ: ಜಯಮೃತ್ಯುಂಜಯ ಸ್ವಾಮಿ

ಬೆಂಗಳೂರು:ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸಮಾಜದ ಮುಖಂಡರ ಸಭೆ ಕರೆಯುವಂತೆ ಆಗ್ರಹಿಸಿ ಅ.18ರಂದು ಬೆಂಗಳೂರಿನ ವಿಧಾನಸೌಧದ ಎದುರು ಧರಣಿ ನಡೆಸುತ್ತೇವೆ ಎಂದು ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವಾಮೀಜಿ  ಅ.18 ರಂದು ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಮಾತು ನೀಡಿದಂತೆ ಸಭೆಯ ದಿನಾಂಕ ಮತ್ತು ಸ್ಥಳ ನಿಗದಿ ಮಾಡಿ ಸಭೆ ನಡೆಸಬೇಕು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಕ್ಕೆ ಹೋರಾಟ ಹಿಂಪಡೆದಿದ್ದೆವು ಎಂದರು.

Comments (0)

Your email address will not be published. Required fields are marked *

Back to top button