ಬೆಂಗಳೂರು : ಬೆಂಗಳೂರಿನ ಶಾಂತಿನಗರದಲ್ಲಿ ವಾಸವಿರುವ ರಾಜ್ ಕುಮಾರ್ ಎಂಬುವವರ ಮನೆಗೆ ಹಾಡಹಗಲೇ ನುಗ್ಗಿದ ಕಿಡಿಗೇಡಿಗಳು ಮನೆಯ ಕಿಟಕಿ, ಬಾಗಿಲು ಗೋಡೆಗಳನ್ನ ಕಡೆವಿರುವ ಘಟನೆ ನಡೆದಿದೆ. ಮಾಜಿ ಕಾರ್ಪೋರೇಟರ್ ಸೌಮ್ಯ ಶಿವಕುಮಾರ್ ಎಂಬುವವರ ತಂದೆಯವರ ಕಡೆಯಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ರಾಜ್ ಕುಮಾರ್ ಕಳೆದ ಕೆಲವು ವರ್ಷಗಳ ಹಿಂದೆ ಒಂದು ಕೋಟಿ 40ಲಕ್ಷಕ್ಕೆ ಮನೆ ಮಾರಾಟ ಮಾಡಿದ್ರು. ಹಣ ಪಾಲುದಾರಿಕೆ ವಿಚಾರದಲ್ಲಿ ಸಂಬಂಧಿಗಳ ನಡುವೆಯೂ ಗಲಾಟೆಯಾಗಿ ಕೇಸ್ ಕೂಡ ದಾಖಲಾಗಿತ್ತು. ಮನೆ ಮಾರಾಟ ಮಾಡಿದ ಮೊತ್ತದಲ್ಲಿ 40 ಲಕ್ಷ ಮಾತ್ರ ಅಡ್ವಾನ್ಸ್ ಆಗಿ ಪಡೆದುಕೊಂಡಿದ್ದರು. ಬಾಕಿ ಹಣವನ್ನ ಖರೀದಿ ಮಾಡಿದ್ದ ಪಾರ್ಥಸಾರಥಿ ಬಳಿ ಕೇಳಿದಾಗ, ಮನೆ ಮೇಲೆ ಕೇಸಿದೆ ಮೊದಲು ಅದನ್ನ ಕ್ಲಿಯರ್ ಮಾಡಿಕೊಟ್ಟು ನಂತ್ರ ಉಳಿಕೆ ಹಣ ಪಡೆದುಕೊಳ್ಳಿ ಎಂದಿದ್ದರು.
ಈ ಪಾರ್ಥಸಾರಥಿ ಮಾಜಿ ಕಾರ್ಪೋರೇಟರ್ ಸೌಮ್ಯ ಶಿವಕುಮಾರ್ ರ ತಂದೆಯಾಗಿದ್ದು, ಇದೀಗ ಏಕಾಏಕಿ ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.