ಬೆಳಗಾವಿ: ಸಿಡಿ ವಿಚಾರದಲ್ಲಿ ಪಾತ್ರ ಮುಖ್ಯನಾ ಪರ್ಫಾರ್ಮೆನ್ಸ್ ಮಾಡಿದವರು ಮುಖ್ಯನಾ ಎಂದು ಗುರುವಾರ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೂರು ನಾಟಕ ಬರೇದಿದ್ದೇನೆ ಪಾತ್ರದಾರರು ಫಿಲ್ಮ್ ಪ್ಲಾಪ್ ಆದರೆ ಯಾರು ಹೊಣೆ. ಪ್ರಜ್ವಲ್ ರೇವಣ್ಣ ಫ್ಯಾಮಿಲಿ ತಲೆತಗ್ಗಿಸಬೇಕು ,ಎಲ್ಲರೂ ರಾಜಿನಾಮೇ ಕೊಡಬೇಕು ಎಂದು ಕಿಡಿಕಾರಿದರು.
ದೇವೆಗೌಡ್ರು ಸುಮ್ಮನೆ ಇರಬೇಕು ಮರ್ಯಾದೆಯಿಂದ ಇದಕ್ಕೆ ಡಿ.ಕೆ ಶಿವಕುಮಾರ್ ಕಾರಣ ಮತ್ತೊಬ್ಬ ಕಾರಣ ಅಂತಾ ಹೇಳಿದರೆ. ಮಾಡುವ ಅನ್ಯಾಯ ಇವರದು ಒಳ್ಳೆಯ ಪುರುಷಾರ್ಥ ಕೆಲಸ ಮಾಡಿದ್ದಾರಾ ಇವರು.ರಮೇಶ ಜಾರಕಿಹೊಳಿ ಆಗಲಿ ಪ್ರಜ್ವಲ್ ರೇವಣ್ಣ ಆಗಲಿ ಎಂದು ಮೊಯ್ಲಿ ಆಕ್ರೋಶ ಹೊರಹಾಕಿದರು.
ಸುರ್ಜೆವಾಲಾ ಅವರು ಕಲೆಕ್ಷನ್ ಗಿರಾಕಿ ರಾಜ್ಯಕ್ಕೆ ಬರತ್ತಾರೆ ಸೂಟ್ ಕೇಸ್ ಒಯ್ಯತ್ತಾರೆ ಎನ್ನುವ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಮಾಡಿದ ಅವರು. ಯತ್ನಾಳ್ ಅವರು ಆ ಸೂಟ್ ಕೇಸ್ ತಗೊಂಡ್ ಹೋಗಿದ್ದಾರಾ..? ಬಿಜೆಪಿ ಸರಕಾರ ಇದ್ದಾಗ ಡಾ. ಸುಧಾಕರ್ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಅಂತಾ ಹೇಳಿದ್ದಾರೆ. ಈಗ ಸುಧಾಕರ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಮೋದಿ ನಂಬೋದ ಯತ್ನಾಳ್ ನಂಬೋದಾ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com