ಗದಗ: ಮಂಗಗಳ ಉಪಟಳದಿಂದ ಅನ್ನದಾತರು ಬೆಳೆಯುತ್ತಿರುವ ಬೆಳೆ ಹಾನಿಯಾಗಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅರಣ್ಯ ವ್ಯಾಪ್ತಿಯ ಶೆಟ್ಟಿಕೆರೆ ಛಬ್ಬಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಡೆದಿದೆ.
ಇದರಿಂದ ಬೇಸತ್ತ ಅನ್ನದಾತರು ಮಂಗಗಳ ಹಾವಳಿಯನ್ನು ನಿಯಂತ್ರಿಸುವಂತೆ ಬಟ್ಟೂರ ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯವರು ಹಾಗೂ ಗ್ರಾಮ ಪಂಚಾಯತಿ ಅವರು ಇದು ನಮಗೆ ಸಂಬಂದಪಟ್ಟಿದ್ದಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹಾಗಾದರೆ ಮಂಗಗಳ ಉಪಟಳವನ್ನು ತಡೆಗಟ್ಟುವರು ಯಾರು ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.