Wednesday, April 30, 2025
24 C
Bengaluru
LIVE
ಮನೆ#Exclusive NewsTop Newsಯೋಗ್ಯತೆವಿದ್ದರೂ ದಲಿತ ನಾಯಕರಿಗೆ ಮುಖ್ಯಮಂತ್ರಿ ಕೈ ಗಾದಿ ತಪ್ಪಿದೆ-ಪರಂ

ಯೋಗ್ಯತೆವಿದ್ದರೂ ದಲಿತ ನಾಯಕರಿಗೆ ಮುಖ್ಯಮಂತ್ರಿ ಕೈ ಗಾದಿ ತಪ್ಪಿದೆ-ಪರಂ

ತೂಮಕೂರು:ತೂಮುಕೂರಿನಲ್ಲಿ ನಡೆದ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘದ ನಿಯಮಿತ ವಾರ್ಷಿಕ ಮಹಾಸಭೆಯಲ್ಲಿ  ಸಾಮರ್ಥ್ಯವಿದ್ದರೂ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿ ಹೋಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದರು. ಮಾತನಾಡಿದ ಸಚಿವರು, ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನ್ ಸ್ವಾಮಿ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಮುದಾಯದ ಹಲವು ಮುಖಂಡರಿಗೆ ಸಿಎಂ ಹುದ್ದೆ ಕೈತಪ್ಪಿದೆ ಎಂದು ಹೇಳಿದರು.ಈ ನಡುವೆ ತುಮಕೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್ ಅವರು ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆದು ಕೆಲ ಕಾಲ ಭಾವುಕರಾದ ಬೆಳವಣಿಗೆ ಕಂಡು ಬಂದಿತು.ಅಂಬೇಡ್ಕರ್ ಅವರ ಶಕ್ತಿಯಿಂದಾಗಿ ಇಂದು ಪ್ರತಿಯೊಬ್ಬರು ಪ್ರಗತಿಯ ಬಾಗಿಲು ತೆರೆಯುವಂತಾಗಿದೆ. ಇದೀಗ ಆಡಳಿತ ದಕ್ಷತೆಯನ್ನು ಸುಧಾರಿಸಲು ದಲಿತ ಸಮುದಾಯಕ್ಕೆ ಸೇರಿದ ಹೆಚ್ಚೆಚ್ಚು ಜನರು ರಾಜಕೀಯಕ್ಕೆ ಬರಬೇಕು. ನಾನು ನನಗೆ ನೀಡಿದ ಎಲ್ಲಾ ಖಾತೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದೇನೆ. ನನ್ನ ಸಮಗ್ರತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ ಎಂದು ತಿಳಿಸಿದರು.

 

 

 

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments