Desai Kannada movie; ಕನ್ನಡ ಚಿತ್ರರಂಗ ಸಾಲು ಸಾಲು ಚಿತ್ರಗಳನ್ನು ನೀಡುವುದರಲ್ಲಿ ಬ್ಯೂಸಿಯಾಗಿದೆ.ಅದೇ ಸಾಲಿನಲ್ಲಿ ಮಹಾಂತೇಶ ವಿ ಚೋಳದಗುಡ್ಡಅವರು ಬರೆದು, ನಾಗಿರೆಡ್ಡಿ ಭಡ ನಿರ್ದೇಶನದ ದೇಸಾಯಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇನ್ನು ಈ ಸಿನಿಮಾ ಬಹುತೇಕ ಚಿತ್ರೀಕರಣ ನಡೆಯುತ್ತಿದೆ.
ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರವು ಕೌಟುಂಬಿಕ ಆಧಾರಿತ ಸಿನಿಮಾವಾಗಿದೆ. ದೇಸಾಯಿ ಚಿತ್ರದಲ್ಲಿ ನಾಯಕನಾಗಿ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ ನಾಯಕಿಯಾಗಿ ಮೈಸೂರಿನ ರಾಧ್ಯ ಅವರು ನಟಿಸುತ್ತಿದ್ದಾರೆ.

ಈ ಸಿನಿಮಾಕ್ಕೆ “ಒರಟ” ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ಕೈ ಜೋಡಿಸಿದ್ದಾರೆ. ಸದ್ಯ ಈ ಸಿನಿಮಾವು ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಸಿನಿಮಾವಾಗಿರುವುದರಿಂದ ಬಯಲು ಸೀಮೆ ಪ್ರದೇಶವಾದ ಬಾದಾಮಿ, ಬಾಗಲಕೋಟೆ ಹಲವಾರು ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಈ ಸಿನಿಮಾ ನಿರ್ದೇಶನ ಮಾಡುತ್ತಿರುವ ನಾಗಿರೆಡ್ಡಿ, ಹಾಗೂ ನಿರ್ಮಾಪಕ ಮಹಾಂತೇಶ್ ಅವರಿಗೆ ಮೊದಲ ಸಿನಿಮಾವಾಗಿದೆ. ಇನ್ನು ಕಿರಿಯ ಕಲಾವಿದರರು ತಮ್ಮದೇ ಶೈಲಿಯಲ್ಲಿ ಕನ್ನಡ ಸಿನಿಮಾರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ.


