ನವದೆಹಲಿ : ದೆಹಲಿಯ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ಅದನ್ನು ಸಾಧಿಸಲು ಬಿಜೆಪಿಗೆ ಮಾತ್ರ ಸಾಧ್ಯ. ಆದರೆ ಅಭಿವೃದ್ಧಿ ಮಾಡದೇ ಆಪ್ ಪಕ್ಷ ಕಳೆದ 10 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ಮಾಡಿದ್ದಾರೆ. ದೆಹಲಿ ಮೆಟ್ರೋದ ನಾಲ್ಕನೇ ಹಂತ ಜನಕಪುರಿ ಮತ್ತು ಕೃಷ್ಣಾ ಪಾರ್ಕ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿರು. ಬಿಜೆಪಿಗೆ ಅವಕಾಶ ನೀಡುವಂತೆ ದೆಹಲಿಯ ಜನರನ್ನು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಯ ಪರಿವರ್ತನ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಜನರನ್ನು ಕೋರಿದರು.ನಾವು ದೆಹಲಿಯಲ್ಲಿ ‘ಎಎಪಿ-ಡಿಎ ನಹೀ ಸಾಹೇಂಗೆ, ಬದಲ್ ಕೆ ರಹೇಂಗೆ’ ಅನ್ನು ಮಾತ್ರ ಕೇಳಬಹುದು. ದೆಹಲಿ ಅಭಿವೃದ್ಧಿ ಬಯಸುತ್ತದೆ ಮತ್ತು ದೆಹಲಿಯ ಜನರು ಬಿಜೆಪಿಯಲ್ಲಿ ವಿಶ್ವಾಸ ಹೊಂದಿದ್ದಾರೆ. ”