Thursday, November 20, 2025
27.5 C
Bengaluru
Google search engine
LIVE
ಮನೆUncategorizedಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹೆಚ್ಚು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿ - ಬಿ. ವೈ...

ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹೆಚ್ಚು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿ – ಬಿ. ವೈ ವಿಜಯೇಂದ್ರ

ಶಿವಮೊಗ್ಗ: ರಾಜ್ಯದೆಲ್ಲೆಡೆ ಬಿಜೆಪಿಯ ಅಲೆ ಕಂಡುಬರುತ್ತಿದೆ. ಜನರು ಕಾಂಗ್ರೆಸ್ ದೂರಾಡಳಿತದಿಂದ ಬೇಸತ್ತಿದ್ದಾರೆ. ಈ ಬಾರಿ ಜನರು ಬದಲಾವಣೆ ಬಯಸಿದ್ದು ರಾಜ್ಯದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಹುಬ್ಬಳ್ಳಿಯ ನೇಹಾ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದೇನೆ ಆ ಕುಟುಂಬದ ಪರವಾಗಿ ಪಕ್ಷ ನಿಲ್ಲಲಿದೆ ಎಂದರು.

ಬಿಜೆಪಿ ಹೆದರಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ಸಿಗರು ಜನತೆಗೆ ಚೊಂಬನ್ನೇ ನೀಡುತ್ತಾ ಬಂದಿದ್ದಾರೆ ಅವರ ಜಾಹೀರಾತಿನಲ್ಲೂ ಇದನ್ನೇ ಹೇಳಿದ್ದಾರೆ ಹಾಗಾಗಿ ಅವರ ಬಗ್ಗೆ ಹೇಳುವುದು ಏನು ಇಲ್ಲ, ಆದರೆ ರಾಜ್ಯದ ಜನತೆ ಈ ಬಾರಿ ಮೋದಿ ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಮನ್ನಣೆ ನೀಡಲು ನಿರ್ಧರಿಸಿದ್ದಾರೆ ಇದರ ಪರಿಣಾಮವಾಗಿ ಪಕ್ಷ ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿ ವೈ. ವಿಜಯೇಂದ್ರ ತಿಳಿಸಿದರು.

ಪ್ರಿಯಾಂಕ ಗಾಂಧಿ ನಿನ್ನೆ ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ವಿಜಯೇಂದ್ರ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹೆಚ್ಚು ಹೆಚ್ಚು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿ ಎಂದು ನಾನು ಆಶಿಸುತ್ತೇನೆ ಇದರಿಂದ ನಮಗೆ ಅನುಕೂಲವೇ ಆಗುತ್ತದೆ ಎಂದು ವಿಜಯೇಂದ್ರ ಮಾತನಾಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments