ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಪಕ್ಷದ ಮಂತ್ರಿಗಳಾಗಲೀ, ಅಥವಾ ಶಾಸಕರಾಗಲೀ, ದೆಹಲಿಗೆ ಭೇಟಿ ನೀಡಿದಾಗ ಅದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗುತ್ತೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೋಳಿ, ಕಾಂಗ್ರೆಸ್ನ ಯಾವುದೇ ಒಬ್ಬ ಮಂತ್ರಿ ಅಥವಾ ಶಾಸಕ ದೆಹಲಿಗೆ ಹೋದಾಗ ಸಾಮಾನ್ಯವಾಗಿ ಚರ್ಚೆಗೆ ಕಾರಣವಾಗುತ್ತೆ. ಡಿಕೆಶಿ ಅವರು, ಪಕ್ಷದ ಕೆಲಸಗಳಿಗೆ ಹೋಗಿರಬಹುದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸೇರಿದ ಶಾಸಕರು ಮತ್ತು ಮುಖಂಡರು ಸಡಸಿದ ಸಭೆಗೂ ಡಿಕೆ ಶಿವಕುಮಾರ್ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.