#Exclusive NewsTop Newsದೇಶ/ವಿದೇಶರಾಜಕೀಯರಾಜ್ಯಸುದ್ದಿ

ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದ ಡಿಸಿಎಂ ಡಿಕೆ ಶಿವಕುಮಾರ್​..!

ಬೆಂಗಳೂರು : 2025 ರ ಕೇಂದ್ರ ಬಜೆಟ್ ಅನ್ನು​ ಫೆಬ್ರವರಿಯಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಲಿದ್ದಾರೆ.ಇನ್ನು ಈ ಬಾರಿಯ ಬಜೆಟ್‌‌ನಲ್ಲಿ ಯಾರಿಗೆಲ್ಲಾ ಏನೆಲ್ಲಾ ಪ್ರಯೋಜನಗಳು ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.

 

ಬೆಂಗಳೂರಿನ  17  ಪ್ರಮುಖ  ಫ್ಲೈ  ಓವರ್​ಗೆ 12 ಸಾವಿರ ಕೋಟಿ ರೂ. ಅಗತ್ಯವಿದೆ .

ಪೂರ್ವದಿಂದ ಪಶ್ಚಿಮ ಕಾರಿಡಾರ್​​ಗೆ 25 ಸಾವಿರ ಕೋಟಿ ರೂ.

ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್​ಗೆ 15 ಸಾವಿರ ಕೋಟಿ ರೂ.

ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯ ಇದೆ.

ಬಿಸಿನೆಸ್ ಕಾರಿಡಾರ್​ಗೆ 27 ಸಾವಿರ ಕೋಟಿ ಅನುದಾನ ಅಗತ್ಯವಿದೆ.

ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನ ಅನುಗುಣವಾಗಿ ರಾಜ್ಯಗಳಿಗೆ ಒಟ್ಟು 1 ಲಕ್ಷ 73 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ಹಂಚಿದೆ. ದೇಶದಲ್ಲಿ ಅತೀ ಹೆಚ್ಚು ಹೆಚ್ಚು ತೆರಿಗೆ ಕಟ್ಟುತ್ತಿರುವುದು ಕರ್ನಾಟಕ. ನಮ್ಮ ತೆರಿಗೆ ನಮ್ಮ ಹಕ್ಕು. ಬಿಜೆಪಿಯ ಇಷ್ಟೊಂದು ಸಂಸದರಿದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡುತ್ತಾ ಏಕೆ ಮೌನವಾಗಿದ್ದಾರೆ ಅಂತಾ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದರು.

Comments (0)

Your email address will not be published. Required fields are marked *

Back to top button