Top Newsಸುದ್ದಿ

ದಾವಣಗೆರೆ: ನಗರದ ದುರ್ಗಾಂಭಿಕಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದ-ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದಲ್ಲಿ ಉಸ್ತುವಾರಿ ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರು ಕುಟುಂಬ ಸಮೇತರಾಗಿ ತೆರಳಿ ದಸರ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದರು.

ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದರು. ಎಸ್.ಎಸ್.ಗಣೇಶ್, ಎಸ್.ಎಸ್ ಬಕ್ಕೇಶ್ ಹಾಗೂ ಕುಟುಂಬದವರು, ದೇವಸ್ಥಾನದ ಧರ್ಮದರ್ಶಿಗಳಾದ ನಾಗರಾಜ್ ಜೋಯಿಸ್, ಶ್ರೀಪಾದ ಭಟ್ಟರು, ಶಾನುಭೋಗರು ಹಾಗೂ ರೈತರು, ಬಾಬುದಾರರು, ಕಾರ್ಯಕರ್ತರು, ಪಾಲಿಕೆ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

 

Comments (0)

Your email address will not be published. Required fields are marked *

Back to top button