ತೆಲಂಗಾಣ: ಪ್ರೇಮ ವಿವಾಹಕ್ಕೆ ನೋ ಎಂದ ತಮ್ಮ ತಂದೆ–ತಾಯಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ, ಬಂಟ್ವಾರಂ ಮಂಡಲದ, ಯಾಚರಂನಲ್ಲಿ ನಡೆದಿದೆ.
ಸುರೇಖಾ ಎಂಬ ಯುವತಿಯ ಪೋಷಕರು ಪ್ರೇಮ ವಿವಾಹಕ್ಕೆ ಸಮ್ಮತಿ ಇಲ್ಲ ಎಂದು ಹೇಳಿದ್ದಾರೆ ಎಂಬ ಕಾರಣದಿಂದ, ಅವರನ್ನು ಮೈ ಕೈ ನೋವಿಗೆ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ನಂಬಿಸಿ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾಳೆ. ಮೃತ ಪೋಷಕರನ್ನು ದಸರಥ್ (58) ಹಾಗೂ ಲಕ್ಷ್ಮಿ (54) ಎಂದು ಗುರುತಿಸಲಾಗಿದೆ. ಈ ಘಟನೆ ತಕ್ಷಣವೇ ಪೊಲೀಸರ ಗಮನಕ್ಕೆ ಬಂದಿದೆ. ಮೃತರ ಪುತ್ರ ದೂರು ನೀಡಿದ್ದು ಪೊಲೀಸರಿಂದ ತನಿಖೆ ಆರಂಭಿಸಲಾಗಿದೆ.
ಪೋಲೀಸರು ಮನೆಯಲ್ಲಿ ಇಂಜೆಕ್ಷನ್ ಮತ್ತು ರಕ್ತದ ಕಲೆಗಳನ್ನು ಗಮನಿಸಿ, ಸುರೇಖಾಳನ್ನ ಪ್ರಶ್ನಿಸಿದಾಗ, ಆಕೆಯೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ವಿಕಾರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಐ ವಿಮಲ್ ತಿಳಿಸಿದ್ದಾರೆ. ಸುರೇಖಾ ಎಂಬ ಯುವತಿ, ಎನ್‌ಐಆರ್‌ಎಸ್‌ನಲ್ಲಿ ನರ್ಸ್ ಆಗಿ ಕೆಲಸ ನಿರ್ಫ್ವಹಿಸುತ್ತಿದ್ದು ತಿಳಿದು ಬಂದಿದೆ . ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ.


