Top Newsಸಿನಿಮಾಸುದ್ದಿ

ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಯಾರನ್ನ ವರಿಸಲಿದ್ದಾರೆ ಮೋಹಕ ತಾರೆ

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಇನ್ನೇನು ಶೀಘ್ರದಲ್ಲಿ ಮದುವೆ ಆಗಲಿದ್ದಾರೆ. ಈ ಮೂಲಕ ಬ್ಯಾಚುಲರ್‌ ಲೈಫ್‌ಗೆ ಗುಡ್‌ ಬಾಯ್‌ ಹೇಳುವ ಸಮಯ ಹತ್ತಿರ ಬಂದಿದೆ. ಹೌದು, ನಟಿ ರಮ್ಯಾ ಅವರ ಮದುವೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಲವರ ಜತೆಗೆ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. ಅವರು, ಇವರು ಎಂದೆಲ್ಲ ಕೆಲವರ ಫೋಟೋಗಳ ಜತೆಗೆ ನಟಿಯೂ ಕಾಣಿಸಿಕೊಂಡಿದ್ದರು. ಆದರೆ, ಅದೆಲ್ಲವನ್ನು ಅಷ್ಟೇ ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಮತ್ತೆ ಅದೇ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದ ಲ್ಲಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದಾರೆ.

ಉದ್ಯಮಿಯನ್ನು ವರಿಸ್ತಾರಾ ರಮ್ಯಾ?

ಹಾಗಾದರೆ ರಮ್ಯಾ ಅವರನ್ನು ವರಿಸಲಿರುವ ಹುಡುಗ ಯಾರು? ಸಿನಿಮಾ ನಟರಾ ಅಥವಾ ಉದ್ಯಮಿಯಾ? ಸದ್ಯದ ಕೆಲ ಮೂಲಗಳ ಪ್ರಕಾರ ಉದ್ಯಮಿಯೊಬ್ಬರನ್ನು ವರಿಸಲಿದ್ದಾರಂತೆ ರಮ್ಯಾ. ಇನ್ನೇನು ನವೆಂಬರ್‌ನಲ್ಲಿ ರಮ್ಯಾ ಅವರ ಬರ್ತ್‌ಡೇ. ಆ ತಿಂಗಳಲ್ಲಿಯೇ ಮದುವೆಯೂ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಚೌಧರಿ ಗಾರ್ಮೆಂಟ್ಸ್‌ ಓನರ್‌ ಪ್ರಭವ್‌ ಚೌಧರಿ ಅವರ ಜತೆಗೆ ರಮ್ಯಾ ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

 

ನಟಿ ರಮ್ಯಾ ಮದುವೆ ವಿಚಾರದ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಗಾಸಿಪ್‌ಗಳು ಗುಲ್ಲೆಬ್ಬಿಸಿದ್ದವು. ಇದೀಗ ಅಂಥದ್ದೇ ಮತ್ತೊಂದು ವದಂತಿ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಇದು ನಿಜವಾ? ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಮಾತಂತೆ ರಮ್ಯಾ ಮದುವೆ ಆಗಲಿದ್ದಾರೆ ಎಂದೂ ದೊಡ್ಡ ಮಟ್ಟದ ಸದ್ದು ಜೋರಾಗಿದೆ. ಆದರೆ, ಈ ಬಗ್ಗೆ ರಮ್ಯಾ ಅವರೇ ಅಧಿಕೃತವಾಗಿ ಹೇಳಬೇಕಿದೆ.

Comments (0)

Your email address will not be published. Required fields are marked *

Back to top button