ಧಾರವಾಡ: ಸಿದ್ದರಾಮಯ್ಯ ಅವರು ಒಪ್ಪಿದಲ್ಲಿ ನಾನು ಮುಂದಿನ ಮುಖ್ಯಮಂತ್ರಿ ಆಗುವೆ ಎಂದು ಹೇಳಿದ್ದ ಹಿರಿಯ ಕಾಂಗ್ರೆಸಿಗ ಆರ್ ವಿ ದೇಶಪಾಂಡೆ ಇದೀಗ ನಾನು ಯಾವ ರೇಸ್ ನಲ್ಲೂ ಇಲ್ಲ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯುವ ಯತ್ನ ಮಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ರಾಜಕೀಯ ಎನೂ ಮಾತನಾಡಲ್ಲ ಎಂದು ಹೇಳಿ ಮಾತು ಮುಂದುವರಿಸಿದರು. ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಇರ್ತಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಕಷ್ಡ ಪಡುತ್ತಿದ್ದಾರೆ. ನಾನು ಯಾವ್ ರೇಸ್ ನಲ್ಲೂ ಇಲ್ಲ. ನಮ್ಮಲ್ಲಿ ಎಲ್ಲವೂ ಸರಿ ಇದೆ ಎಂದರು.
ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹ ಕಷ್ಟ ಪಡುತ್ತಿದ್ದಾರೆ. ಸರ್ಕಾರದಲ್ಲಿ ಎಲ್ಲಾವೂ ಸರಿ ಇದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಮೇಲೆ ಆಸೆ ಪಡಲು ಅವಕಾಶವೇ ಇಲ್ಲ.
ಸಿಎಂ ಸ್ಥಾನದ ವಿಚಾರವಾಗಿ ಮಾಧ್ಯಮದವರು ಎಷ್ಟು ಪ್ರಚೋದನೆ ಮಾಡಿದರೂ ನಾನು ನಿಮ್ಮ ಬಲೆಯಲ್ಲಿ ಬಿಳಲ್ಲ ಸರ್ಕಾರ ಹಾಗೂ ಸಿಎಂ ಕುರ್ಚಿ ವಿಚಾರದ ಹೇಳಿಕೆಯ ಗೊಂದಲಗಳಿಗೆ ಅವರು ತೆರೆ ಎಳೆದರು.