Thursday, November 20, 2025
22.5 C
Bengaluru
Google search engine
LIVE
ಮನೆ#Exclusive NewsTop Newsದರ್ಶನ್‌ ಧರಿಸಿದ್ದ ಟೀ ಶರ್ಟ್‌ನಿಂದ ಟ್ರೆಂಡಾಯಿತ್ತು ಪೂಮಾ ಟೀ ಶರ್ಟ್​

ದರ್ಶನ್‌ ಧರಿಸಿದ್ದ ಟೀ ಶರ್ಟ್‌ನಿಂದ ಟ್ರೆಂಡಾಯಿತ್ತು ಪೂಮಾ ಟೀ ಶರ್ಟ್​

ಬೆಂಗಳೂರು: ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಅವರ ಕೈದಿ ನಂಬರ್ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಆದರೆ ಈಗ ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದಂತ ಪೂಮಾ ಟೀ ಶರ್ಟ್ ವೈರಲ್​ ಆಗಿದ್ದು​ ಫುಲ್​ ಟ್ರೆಂಡಿಂಗ್​ನಲ್ಲಿ ಇದೆ.

ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹೋಗುವಾಗ ದರ್ಶನ್ ಅವರು ಪೂಮಾ ಎಂದು ಬರೆದಿರುವ ಕಪ್ಪು ಬಣ್ಣದ ಟೀಶರ್ಟ್ ಹಾಗೂ ಬ್ಲೂ ಕಲರ್ ಜೀನ್ಸ್​ ಹಾಕಿಕೊಂಡಿದ್ದರು. ಆದರೆ ದರ್ಶನ್ ಧರಿಸಿದಂತ ಸೇಮ್​ ಟು ಸೇಮ್ ಪೂಮಾ ಟೀಶರ್ಟ್​ ಅನ್ನು​ ಅವರ ಅಭಿಮಾನಿಗಳು ಕೂಡ ಹಾಕಿಕೊಂಡಿದ್ದಾರೆ. ಪೂಮಾ ಟೀಶರ್ಟ್ ಧರಿಸಿ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ.

ದರ್ಶನ್ ಅವರ ಕೈದಿ ನಂಬರ್ 6106 ಬೆನ್ನಲ್ಲೇ ಟೀ ಶರ್ಟ್ ಟ್ರೆಂಡಿಂಗ್​ನಲ್ಲಿದೆ. ದರ್ಶನ್​ಗೆ ಕೈದಿ ನಂಬರ್ ನೀಡಿದಾಗ ಸಾಕಷ್ಟು ಅಭಿಮಾನಿಗಳು 6106 ನಂಬರ್​ ಅನ್ನು ತಮ್ಮ ದೇಹದ ಹಚ್ಚೆ ಹಾಕಿಸಿಕೊಂಡಿದ್ದರು. ಕಾರು, ಬೈಕ್​ ಮೇಲೆಯು ಕೈದಿ ನಂಬರ್​ ಅನ್ನು ಸ್ಟಿಕ್ಕರ್ ಮಾಡಿಸಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಿದ ಮೇಲೆ 511 ಕೈದಿ ನಂಬರ್ ನೀಡಲಾಗಿತ್ತು. ಈ ನಂಬರ್​ ಅನ್ನು ಅಭಿಮಾನಿಗಳು ಟೀಶರ್ಟ್ ಹಾಗೂ ವಾಹನಗಳ ಮೇಲೆ ಹಾಕಿಕೊಂಡಿದ್ದರು. ಈ ಎಲ್ಲ ಆದ ಮೇಲೆ ಇದೀಗ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಹಾಕಿಕೊಂಡಂತ ಟೀಶರ್ಟ್​ ಸಖತ್ ಟ್ರೆಂಡ್ ಆಗುತ್ತಿದೆ. ಇನ್ನು ಬಳ್ಳಾರಿ ಜೈಲಿಗೆ ದರ್ಶನ್ ಹೋಗಿ 3 ದಿನಗಳು ಆಗಿದ್ದು ಅಂದಿನಿಂದ ಒಂದೇ ಟೀಶರ್ಟ್​​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments