Thursday, November 20, 2025
19.5 C
Bengaluru
Google search engine
LIVE
ಮನೆಮನರಂಜನೆಅಣ್ಣಾವ್ರ ಕಾಲಿನ ದೂಳಿಗೂ ಸಮ ಇಲ್ಲ ಎಂದ ದರ್ಶನ್

ಅಣ್ಣಾವ್ರ ಕಾಲಿನ ದೂಳಿಗೂ ಸಮ ಇಲ್ಲ ಎಂದ ದರ್ಶನ್

Kateera : ಕಾಟೇರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಪಟ್ಟೆ ದೋಚುತ್ತಿದ್ದು , ಚಾಲೆಂಜಿಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನಾ ಎಂಬುದು ಸಾಬೀತಾಗಿದೆ. ಮೊದಲ ದಿನ ಕಾಟೇರ ಸಿನಿಮಾ 19.76 ಕೋಟಿ ಕಲೆಕ್ಷನ್ ಮಾಡಿದ್ದು ಈ ಸಿನಿಮಾ ಮೂರನೇ ದಿನ ಅಂದರೆ ಭಾನುವಾರ 20.96 ಕೋಟಿ ರೂಪಾಯಿ ಗಳಿಸಿದೆ. ಮೂರು ದಿನಗಳಲ್ಲಿ ಒಟ್ಟು ಕಾಟೇರ ಸಿನಿಮಾ 50.73 ಕೋಟಿ ಬಾಚಿದೆ.

ಸಿನಿಮಾ ಗೆದ್ದ ಹಿನ್ನಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಯಿತು. ಈ ಸಂಸರ್ಭದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದರ್ಶನ್ , ನಾನು ರಾಜ್​ಕುಮಾರ್ ಅವರ ಕಾಲಿನ ದೂಳಿಗೂ ಸಮ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಅವರಿಗೆ ನನ್ನನ್ನು ಹೋಲಿಸಬೇಡಿ, ಅವರು ಮಾಡಿರುವ ಪಾತ್ರಗಳಲ್ಲಿ 0.5 ಅಷ್ಟು ಕೂಡ ಮಾಡಲು ಆಗಲ್ಲ. ಆದರೆ ಪ್ರಯತ್ನ ಮಾಡಾಬಹುದಷ್ಟೆ.

ದರ್ಶನ್ ಸರ್​ಗೆ ಮತ್ತೊಂದಿಷ್ಟು ಪ್ರಶ್ನೆಗಳ ಸುರಿಮಳೆ ಮೀಡಿಯಾದವರು ಕೇಳಿದಾಗ ಕಾಟೇರ ಕಥೆ ಕೇಳಬೇಕಾದರೆ ನಾನು ಒಂದು ಚಂದಮಾಮನ ಕಥೆ ಕೇಳಿದ್ದೀನಿ ಅಂದರು. ಸಿನಿಮಾದಲ್ಲಿ ಒಳ್ಳೇಯ ಮೆಸೇಜ್ ಇದೆ. ಇವತ್ತು ಜನ ಮಾತನಾಡುವುದೇನು? ಗಂಡಸು ಬೆವರು ಸುರಿಸಬೇಕು , ಜಲ್ಲು ಸುರಿಸಬಾರದು ಅಂತಾರೆ . ಅಷ್ಟು ಸಾಕು ಇದರಲ್ಲಿ ಎಲ್ಲಾಅರ್ಥ ಆಗುತ್ತೆ ಅಂದುಕೊಂಡಿದಿನಿ.

ಸಿನಿಮಾ ಕಥೆ ಆಯ್ಕೆ ಮಾಡಬೇಕಾದರೆ ನನ್ನದೇ ಆದ ಮೂರು ನಿಯಮಗಳನ್ನು ಪಾಲನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನ ಮಾಡಬಾರದು. ಅನ್ನ ನೀಡುವ ಅನ್ನದಾತರಿಗೆ ಮೋಸ ಮಾಡಬಾರದು ಇಷ್ಟು ನನ್ನ ತಲೆಯಲ್ಲಿ ಇಟ್ಟುಕೊಂಡು ನಾನು ಸಿನಿಮಾ ಮಾಡುತ್ತೇನೆ . ನಾನು ಯಾವತ್ತಿಗೂ ಪ್ರಶಸ್ತಿ ಬರುತ್ತೆ , ಪ್ರಶಸ್ತಿಗೊಸ್ಕರ ಸಿನಿಮಾ ಮಾಡಲ್ಲ , ಮಾಡೋದು ಇಲ್ಲ ಅಂತ ಖಡಕ್​ ಆಗಿ ಉತ್ತರ ಕೊಟ್ಟಿದ್ದಾರೆ.

ನಾನೊಬ್ಬ ಕಮರ್ಷಿಯಲ್ ನಟ . ನನ್ನ ನಂಬಿ ಹಣ ಹಾಕಿದ ನಿರ್ಮಾಪಕರಿಗೆ ಹಣ ವಾಪಸ್ ಬರಬೇಕು. ಚಿತ್ರದಲ್ಲಿ ಅಭೀನಯಿಸಿದ ಎಲ್ಲಾ ಕಲಾವಿಧರಿಗೂ ಒಂದಷ್ಟು ಅನುಕೂಲವಾಗಬೇಕು , ಅಷ್ಟೇ ಅಲ್ಲದೆ ಇದರ ಜೊತೆಗೆ ಸಿನಿಮಾ ಕೂಡ ಗೆದ್ದು ಮತ್ತೊಂದಿಷ್ಟು ಸೆಟ್ಟೇರಲು ಕಾರಣವಾಗೇಕು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments