Wednesday, April 30, 2025
24 C
Bengaluru
LIVE
ಮನೆಸಿನಿಮಾಆರ್ಡರ್-ಮರ್ಡರ್. ಕ್ಯಾಕರಿಸಿರಪ್ಪಾ- ದರ್ಶನ್

ಆರ್ಡರ್-ಮರ್ಡರ್. ಕ್ಯಾಕರಿಸಿರಪ್ಪಾ- ದರ್ಶನ್

ಡಿ ಗ್ಯಾಂಗ್‌ಗೆ ಕುಣಿಕೆ…ಸೆಕೆಂಡರಿ ಎವಿಡೆನ್ಸ್…ಕೊಟ್ಟ ಹೊಡೆತ !
ಬಕ್ಕಬಾರಲು ಬಿದ್ದಿದ್ದೆಲ್ಲಿ ಸೆಲೆಬ್ರಿಟೀಸ್ ಮೆದುಳು…ಇಳೀತಾ ಪಿತ್ತ ?

ವಾ.ಓ: `ನಾನು ಲಾಕ್ ಆಗ್ತೀನಿ ಅಂತ ತಿಳಕೊಂಡರ‍್ಲಿಲ್ಲ…ಸಾರ್…’ ಇದು ದರ್ಶನ್ ಖಾಕಿ ಮುಂದೆ ನೀಡಿದ ಮೊದಲ ತಪ್ಪೊಪ್ಪಿಗೆ. ರೇಣುಕಾಸ್ವಾಮಿ ಕೊಲೆಯಾದ ನಂತರ ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದ್ದರು ದರ್ಶನ್. ಮರುದಿನ ಮೈಸೂರಿಗೆ ಹೋಗಿದ್ದರು. ಡೆವಿಲ್ ಶೂಟಿಂಗ್ ಮಾಡಲು ಮೈ ಹುರಿಗೊಳಿಸುತ್ತಿದ್ದರು. ಬೆಳ್ಳಂ ಬೆಳಿಗ್ಗೆ ಜಿಮ್ ಮಾಡುವ ಹೊತ್ತಲ್ಲಿ ಬೆಂಗಳೂರಿನಿAದ ಹೊರಟು, ಹೆಡಮುರಿಗೆ ಕಟ್ಟಿ ತಂದಾಗಲೂ ದಚ್ಚು ಮದ ಇಳಿದಿರಲಿಲ್ಲ. ಯಾವಾಗ ಖಾಕಿ ಅದೊಂದು ಫೋಟೊ ಹಿಡಿದರೋ…ದಚ್ಚು ಕೈ ಕಟ್ ಬಾಯ್ ಮುಚ್…

ವಾ.ಓ: ರೇಣುಕಾಸ್ವಾಮಿ ಕೊಲೆಯ ನಂತರ ಅದರ ಮೊದಲ ಫಲಿತಾಂಶ ತಿಂದಿದ್ದು ಪ್ರೇಯಸಿ ಪವಿತ್ರಾಗೌಡ. `ನಿನ್ನಿಂದಲೇ ಅನಾಹುತ ಆಗಿದ್ದು…’ ಹೀಗಂತ ಆಕೆಗೆ ಹೊಡೆದಿದ್ದಾರೆ. ಆಕೆ ಒಂದು ದಿನ ರಾಜರಾಜಶ್ವೇರಿ ಆಸ್ಪತ್ರೆಯಲ್ಲಿ ಮುಲುಗಿದ್ದಾರೆ. ನಂತರ ಹೆಣವನ್ನು ಎಲ್ಲಿಗೆ ಸಾಗಿಸಬೇಕು, ಏನು ಮಾಡಬೇಕು, ಯಾವ ರೀತಿ ಸಾಕ್ಷಿ ನಾಶ ಪಡಿಸಬೇಕು…ಸೆಲೆಬ್ರಿಟೀಸ್ ಶರೀರಗಳು ಮೀಟಿಂಗ್ ಮಾಡಿವೆ. ಸ್ಟೋನಿ ಬ್ರೂಕ್ ಮಾಲೀಕ ಕಮ್ ದಾಸನ ಬಾಲ…ಪ್ರದೂಷ್ ಕೊಟ್ಟ ಐಡಿಯಾನೇ ಈಗ ಎಲ್ಲರ ಬುಡಕ್ಕೆ ಸುಣ್ಣದ ನೀರು ಬಿಟ್ಟಿದೆ. ಅದೂ ಉಚಿತವಾಗಿ…

ವಾ.ಓ: ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್‌ಗೆ ಮುಳುವಾಗಿದ್ದೇ ಸೀಸನ್ಡ್ ಅಲ್ಲದ ಆರೋಪಿಗಳು. ಅಂದರೆ ಪ್ರದೂಷ್ ಅರೆಂಜ್ ಮಾಡಿದ ಆರೋಪಿಗಳು ಕೊಲೆಪಾತಕರಲ್ಲ…ಅವರಿಗೆ ಕೊಲೆ ಪ್ರಕರಣ ಹೇಗೆ ಹ್ಯಾಂಡಲ್ ಮಾಡಬೇಕೆಂದು ಗೊತ್ತಿರಲಿಲ್ಲ. ಅದೇ ಭಯದಲ್ಲಿ ಹೆಣವನ್ನು ರಾಜಕಾಲುವೆ ಬಳಿ ತಂದಿದ್ದಾರೆ. ಹೆಣದ ಬಟ್ಟೆಯನ್ನು ಮೋರಿಗೆ ಎಸೆದಿದ್ದಾರೆ. ಆದರೆ ಶವವನ್ನು ದಡದ ಮೇಲೆಯೇ ಬಿಸಾಕಿದ್ದಾರೆ. ಕೈಯಾರೆ ಕಲ್ಲು ಚಪ್ಪಡಿಯನ್ನು ಇಡೀ ಗ್ಯಾಂಗ್ ಮೇಲೆ ಎತ್ತಿ ಹಾಕಿದ್ದಾರೆ. ಅದರ ಫಲಿತಾಂಶವನ್ನು ದಿ ಗ್ರೇಟ್ ಆಸ್ಕರ್ ಅವಾರ್ಡ್ ವಿನ್ನರ್ ಆಗಬಹುದಾಗಿದ್ದ ದರ್ಶನ್ ಎರಡೂ ಕೈಯಿಂದ ಉಣ್ಣುತ್ತಿದ್ದಾರೆ.

ವಾ.ಓ: ವೃಷಭಾವತಿ ನೀರಿಗೆ ಹೆಣವನ್ನು ಬಿಸಾಕಿ, ಬಟ್ಟೆಯನ್ನು ದಡದ ಮೇಲೆಯೇ ಒಗೆದಿದ್ದರೆ…ಈ ಕೇಸ್ ಮುಚ್ಚಿಹೋಗುವ ಸಾಧ್ಯತೆ ಇತ್ತು. ಅದು ಹೇಗೆ ? ಉತ್ತರ ಇದೆ. ರೇಣುಕಾಸ್ವಾಮಿ ಚಿತ್ರದುರ್ಗದ ವ್ಯಕ್ತಿ. ನೀರಿಗೆ ಶವ ಬಿಸಾಕಿದ್ದರೆ…ಅದು ವಾರದ ನಂತರವೊ…ಇನ್ನೆಷ್ಟೊ ದಿನಕ್ಕೊ ಸಿಗುತ್ತಿತ್ತು. ಅಷ್ಟರಲ್ಲಿ ಸಾಕ್ಷಿಗಳು ನಾಶವಾಗಿರುತ್ತಿದ್ದವು. ದೇಹವನ್ನು ಜಲಚರಗಳು ತಿಂದಿರುತ್ತಿದ್ದವು. ಅದ್ಯಾವ ವ್ಯಕ್ತಿ ಎಂದು ಕಂಡು ಹಿಡಿಯುವಷ್ಟರಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅದನ್ನು ರಾಜಕೀಯ ಪ್ರಭಾವ ಬಳಸಿ ಮುಚ್ಚಿ ಹಾಕಿರುತ್ತಿದ್ದರು. ಅಲ್ಲಿಗೆ ದರ್ಶನ್ ಡೆವಿಲ್ ಶೂಟಿಂಗ್‌ನಲ್ಲಿ ನಿರಾತಂಕವಾಗಿ ನಿರತರಾಗಿರುತ್ತಿದ್ದರು. ಹಾಗಾಗಲು ಬಿಡದಿರುವುದೇ ವೆರೈಟಿ ವೆರೈಟಿ ಕರ್ಮ…

ವಾ.ಓ: ಸೆಕೆಂಡರಿ ಎವಿಡೆನ್ಸ್…ಇದೇ ದರ್ಶನ್‌ಗೆ ಮುಳುವಾಗಿದೆ. ಪ್ರತ್ಯಕ್ಷ ಸಾಕ್ಷಿ ಅಂತ ಸಿಕ್ಕಿರೋದು ಒಂದೇ. ಅದು ಪಟ್ಟಣಗೆರೆ ಶೆಡ್ ಕಾವಲುಗಾರ. ಆತನೇ ಕೊಲೆ ಘಟನೆಗೆ ನೇರ ಸಾಕ್ಷಿಯಾಗಿದ್ದಾನೆ. ಅದನ್ನು ಡೈರೆಕ್ಟ್ ಎವಿಡೆನ್ಸ್ ಅಂದು ಪರಗಣಿಸಲಾಗುತ್ತದೆ. ಉಳಿದಂತೆ ಪರೋಕ್ಷವಾಗಿ ಅಂದರೆ ಸೆಕೆಂಡರಿ ಎವಿಡೆನ್ಸ್ಗಳಾಗಿ ನೂರಾ ಇನ್ನೂರು ಸಾಕ್ಷಿಗಳು ಸಿಕ್ಕಿವೆ. ಸಿಡಿಆರ್, ಸಿಸಿ ಟಿವಿ, ಪಿಎಂ ರಿಪೋರ್ಟ್, ಫೋಟೊಗ್ರಫಿ, ಎಫ್‌ಎಸ್‌ಎಲ್ ವರದಿ, ಸಾಂಧರ್ಭಿಕ ಸಾಕ್ಷಿಗಳ ಹೇಳಿಕೆ…ಎಲ್ಲವೂ ದರ್ಶನ್ ಗ್ಯಾಂಗ್‌ಗೆ ವಿರುದ್ಧವಾಗಿವೆ. ಅದೇ ಇಡೀ ಗ್ಯಾಂಗ್‌ಗೆ ಕುಣಿಕೆ ಬಿಗಿಯಲಿದೆ. ಅನುಮಾನ ಇಲ್ಲವೇ ಇಲ್ಲ…

ವಾ.ಓ: ಬಹುಶಃ ಇದನ್ನೆಲ್ಲ ಡಿ ಗ್ಯಾಂಗ್ ಯೋಚನೆ ಮಾಡಿರಲಿಲ್ಲ. ಅದರಲ್ಲೂ ದರ್ಶನ್ ಪಕ್ಕ ನಿಂತರ ಕಿರಾತಕರಿಗೆ ಇದರ ಜ್ಞಾನವೂ ಇರಲಿಲ್ಲ. ದರ್ಶನ್ ದೈವಾಂಶ ಸಂಭೂತ, ನಾಲಿಗೆ ಅಲ್ಲಾಡಿಸಿದರೆ ಸಾಕು ಮಾವಿನ ಕಾಯಿ ತನ್ನಿಂದ ತಾನೇ ಉದುರುದುರಿ ಬೀಳುತ್ತವೆ. ಯಜಮಾನ ಒಂದು ಫೋನ್ ಮಾಡಿದರೆ ಸಾಕು, ಇಡೀ ಪೊಲೀಸ್ ಇಲಾಖೆ ತೂಗುದೀಪ ನಿಲಯದ ಮುಂದೆ ಮಂಡಿ ಊರುತ್ತದೆ. ಅದರಿಂದ ನಾವು ಬಚಾವಾಗೋದು ಸುಲಭ. ನಮ್ಮನ್ಯಾರು ತಡೆಯೋರು ಹಿಡಿಯೋರು…ಹೀಗಂತ ಎಣ್ಣೆ ಹೊಡೆದ ನಶೆಯಲ್ಲಿ ಬೀಗುತ್ತಿತ್ತು. ಸೀನ್ ಫುಲ್ ಚೇಂಜ್. `ಒಂದು ಸಿಗರೇಟು ಕೊಡಿ ಸಾರ್…ಬೀಡಿನಾದ್ರೂ ಓಕೆ…’ ಖಾಕಿ ಮುಂದೆ ದರ್ಶನ್ ಬೇಡುತ್ತಿದ್ದಾರೆ. ಇದು ನೆಲದ ಕಾನೂನು…

ವಾ.ಓ: ಎಲ್ಲವೂ ಮುಗಿದು ಹೋಗಿದೆ. ಇನ್ನೇನಿದ್ದರೂ ನ್ಯಾಯಾಲಯದ ಮುಂದೆ ಕೈ ಕಟ್ಟಿ ನಿಲ್ಲುವುದೊಂದೇ ಡಿ ಗ್ಯಾಂಗ್‌ಗೆ ಉಳಿದಿರುವ ದಾರಿ. ವಾದ ಪ್ರತಿವಾದ ನಡೆಯುತ್ತದೆ. ಎಷ್ಟು ವರ್ಷ ? ಗೊತ್ತಿಲ್ಲ. ಒಂದಲ್ಲ ಒಂದು ದಿನ ತೀರ್ಪು ಹೊರ ಬರುತ್ತದೆ. ಅದಕ್ಕೂ ಮುನ್ನವೇ ಸೆಲೆಬ್ರಿಟೀಸ್ ಬೊಂಬಡಾ ಬಜಾಯಿಸುತ್ತಿದ್ದಾರೆ. `ನಮ್ ಬಾಸ್ ಒಳಗಿದ್ಧಾನೆ…ಮಾತಾಡೋರು ಮಾತಾಡಲಿ…ಹೊರಗೆ ಬಂದ ಮೇಲೆ ನೋಡಿಕೊಳ್ಳುತ್ತೀವಿ…’ ಅರೆ ಇಸ್ಕಿ…ಇನ್ನೂ ತಗ್ಗುತ್ತಿಲ್ಲವಾ ಇವರ ಕೊಬ್ಬು…ದುರಹಂಕಾರ…ಸಾಮಾನ್ಯ ಜನರು ಕ್ಯಾಕರಿಸುತ್ತಿದ್ದಾರೆ. ಸೇಮ್ ಟೈಮ್ ಖಾಕಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಸಮಯ ನೋಡಿಕೊಂಡು ಇಡಬಾರದ ಜಾಗದಲ್ಲಿ ಲಾಠಿಯನ್ನು ಸಕಲರಿಗೂ ಸಮಾನವಾಗಿ ಸ್ಥಾಪಿಸುತ್ತದೆ…

-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments