Friday, August 22, 2025
20.8 C
Bengaluru
Google search engine
LIVE
ಮನೆಜಿಲ್ಲೆಒಟ್ನಲ್ಲಿ ದರ್ಶನ್ಗೆ ನೆಮ್ಮದಿ ಇಲ್ಲ

ಒಟ್ನಲ್ಲಿ ದರ್ಶನ್ಗೆ ನೆಮ್ಮದಿ ಇಲ್ಲ

ಫ್ರೀಡಂ ಟಿವಿ : ಒಂದು ಕಡೆ ಕಾಟೇರಾ ಯಶಸ್ಸಿನ ಸಂಭ್ರಮದಲ್ಲಿದ್ದ ಡಿ ಬಾಸ್​ಗೆ ಇದೀಗ ಮತ್ತೊಂದು ಸುತ್ತಿಗೆ ನೆಮ್ಮದಿ ಇಲ್ಲದಂತಾಗಿದೆ.. ಪದೇ ಪದೇ ದರ್ಶನ್ ಟಾರ್ಗೆಟ್ ಆಗೋದು ಯಾಕೆ ಅಂತ ಫ್ರೀಡಂ ಟಿವಿ ಜಸ್ಟ್ ವಾರದ ಹಿಂದಷ್ಟೆ ವರದಿ ಮಾಡಿತ್ತು.. ದರ್ಶನ್ಗೆ ಹಿತ ಶತ್ರುಗಳ ಕಾಟ ಹೆಚ್ಚಾಗಿದೆ.. ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಏಳಿಗೆ ಸಹಿಸದವರ ದೊಡ್ಡ ಹಿಂಡೇ ಇದೆ ಅಂತಾನೂ ಹೇಳಿದ್ವಿ… ಇದೀಗ ಮತ್ತೊಂದು ಸುತ್ತಿಗೆ ದರ್ಶನ್ ಪವಿತ್ರಾಗೌಡ ಹೆಸ್ರು ಥಳುಕು ಹಾಕಿಕೊಂಡಿದೆ.

‘ಒಂದು ದಶಕ ಕಳೆದಿದೆ, ಹಲವು ವರ್ಷಗಳಿದೆ. 10 ವರ್ಷಗಳ ರಿಲೇಷನ್‌ಶಿಪ್‌. ಥ್ಯಾಂಕ್‌ ಯು’ ಎಂದು ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಪೋಸ್ಟ್ ಮತ್ತು ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡರ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ,ದರ್ಶನ್ ನೆಮ್ಮದಿಗೆ ಬೆಂಕಿ ಬಿದ್ದಂತಾಗಿದೆ.
ಕ್ರಾಂತಿ ಸಿನಿಮಾ ಪ್ರಚಾರ ಬಹಿಷ್ಕಾರದ ವೇದನೆ ,ದರ್ಶನ್ ಬಗೆಗಿನ ವಿಮರ್ಶೆ ,ಡಿ ಬಾಸ್ ಬೆಳವಣಿಗೆಗೆ ಅಡ್ಡಿ ಪಡಿಸೋ ಪ್ರಯತ್ನ ,ಮೊನ್ನೆ ಮೊನ್ನೆ ನಡೆದ ಲೇಟ್​ ನೈಟ್ ಪಾರ್ಟಿ ವಿವಾದ ಹೀಗೆ ಹತ್ತು ಹಲವು ಸಾಲು ಸಾಲು ಸವಾಲು ದರ್ಶನ್ ರವರನ್ನ ಮಾನಸಿಕವಾಗಿ ಇನ್ನಿಲ್ಲದೆ ಕಾಡಲಾರಂಭಿಸಿದೆ.

ಖುದ್ದು ರಾಕ್ಲೈನ್ ವೆಂಕಟೇಶ್ ಕೂಡ ಯಾಕೆ ದರ್ಶನ್ ರವರನ್ನೇ ಟಾರ್ಗೆಟ್ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ರು ,ದರ್ಶನ್ ಸಕ್ಸಸ್ ಮೇಲೆ ಯಾಕೆ ಮತ್ಸರ ,ದರ್ಶನ್ ಫಾರ್ಮ್ ಹೌಸ್ ಮೇಲೆ ಯಾಕೆ ಉರಿ ,ಡಿ ಬಾಸ್ ದಾಂಪತ್ಯ ಲೈಫನ್ನೇ ಮಾತ್ರ ಯಾಕೆ ಪ್ರಶ್ನೆ ,ಹೀಗೆ ಡಿ ಬಾಸ್ ಪರ ಗಟ್ಟಿ ದ್ವನಿಯಲ್ಲಿ ರಾಕ್ಲೈನ್ ಪ್ರಶ್ನೆ ಮಾಡಿದ್ರು .
ಈಗ ಪವಿತ್ರ ಗೌಡರೊಂದಿಗಿನ ಫೋಟೋ ಭಾರಿ ಚರ್ಚೆಯಾಗ್ತಿದೆ ,2016ರಲ್ಲಿ ಥ್ರಿಲ್ಲರ್ ಸಿನಿಮಾ 54321 ಚಿತ್ರದ ನಾಯಕಿಯಾಗಿದ್ದ ಪವಿತ್ರ , ಸಾಗುವ ದಾರಿ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ‘ಪ್ರೀತಿ ಕಿತಾಬು’ ಹೆಸರು ತಂದುಕೊಟ್ಟ ಚಿತ್ರ.

ಈ ಹಿಂದೆ ನಟ ದರ್ಶನ್‌ ಅವರ ಅಕ್ಕ ಮತ್ತು ತಾಯಿ ಜೊತೆಗಿನ ಫೋಟೋ ಅಪ್ಲೋಡ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಈಗ ಮತ್ತೆ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿರುವುದರ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪವಿತ್ರಾಗೆ ಎಚ್ಚರಿಕೆ ನೀಡಿದ್ದಾರೆ ಹೇಗೆ ಮುಂದುವರೆದರೆ ಕಾನೂನು ಹೋರಾಟ ಮಾಡುವೆ ಎಂದಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಖಳನಾಯಕರ ಮಕ್ಕಳ ಗೆಲುವು ಸುಲಭದ ಮಾತಲ್ಲ ಅನ್ನೋದು ರಹಸ್ಯವಾಗಿ ಏನು ಉಳಿದಿಲ್ಲ, ಪ್ರತಿಭೆಗೆ ಕೊರತೆಯಿಲ್ಲದ ,ಯಾವ ಪಾತ್ರಕ್ಕೂ ಹೊಂದಿಕೊಳ್ಳೋ ಕಲೆ ಗಿಟ್ಟಿಸಿಕೊಂಡವರಾದರೂ ಸರಿಯೇ ,ಖಳನಾಯಕರ ಮಕ್ಕಳೆಂಬ ಕಾರಣಕ್ಕೆ ಸಿನಿಮಾಗಳಲ್ಲಿ ನಟನಾಗೋ ಅವಕಾಶಕ್ಕೆ ಕತ್ತರಿ ಬೀಳುತ್ತೆ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ.

ವಿಲನ್ ಪಾತ್ರದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಆಳಿದ್ದ ಬಹು ಮುಖ ಪ್ರತಿಭೆಗಳ ಪೈಕಿ ತೂಗುದೀಪ ಕೂಡ ಒಬ್ಬರು ,ಅಂಥವರ ಮಗ ತಂದೆಯ ಕಲೆಯಲ್ಲಿನ ಲವಲೇಶದಷ್ಟು ಕಳೆದುಕೊಳ್ಳದೆ ಹೊತ್ತು ತಂದ ಆ ಮಗನೇ ದಿ ಗ್ರೇಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅಭಿನಯಕ್ಕೆ ,ದರ್ಶನ್ ಸ್ಟೈಲಿಗೆ ,ದರ್ಶನ್ ಡೈಲಾಗಿಗೆ, ಪ್ರತ್ಯೇಕ ಫ್ಯಾನ್ ಫಾಲ್ಲೋವರ್ಸ್ಗಳಿದ್ದಾರೆ,ಹಾಗಾಗಿನೇ ಉಳಿದವರಿಗಿಂತ ದರ್ಶನ್ರನ್ನ ಭಿನ್ನವಾಗಿಸಿದೆ. ಬೆಳೆಯುವರನ್ನ ತುಳಿಯುವವರು ಇದ್ದೆ ಇರ್ತಾರೆ .ಆದ್ರೆ ಉದ್ದಕ್ಕೂ ತುಳಿತವನ್ನ ಕೊಡವಿ ಎದ್ದು ನಿಲ್ಲೋ ಅಪರೂಪದ ನಟ ಅದೂ ದರ್ಶನ್ ಅಂದ್ರೆ ತಪ್ಪಾಗಲಾರದು,ಸುತ್ತಲೂ ವಿವಾದ ,ಅನೇಕ ವಿಮರ್ಶೆ ,ಸಿನಿಮಾ ಪ್ರಚಾರ ಬಹಿಷ್ಕಾರ ,ದಾಂಪತ್ಯ ಜೀವನದಲ್ಲೂ ಗದ್ದಲ ,ಒಟ್ಟಾರೆ ನೆಮ್ಮದಿ ಕಳೆದುಕೊಂಡ್ರ ಡಿ ಬಾಸ್.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments