#Exclusive NewsTop Newsಜಿಲ್ಲೆಸಿನಿಮಾಸುದ್ದಿ

ದರ್ಶನ್‌ಗೆ ತಿವ್ರ ಬೆನ್ನು ನೋವು; ಜೈಲಿಂದ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್!

 ಬಳ್ಳಾರಿ:ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕಾರಾಗೃಹದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಗರದ ಬಳ್ಳಾರಿ ಮೆಡಿಕಲ್ ಕಾಲೇಜು (ಬಿಮ್ಸ್)ಗೆ ಮಂಗಳವಾರ ರಾತ್ರಿ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಮಾಡಲಾಯಿತು.

 

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸಾರೆಡ್ಡಿ ನೇತೃತ್ವದ ವೈದ್ಯರ ತಂಡ ಜೈಲಿಗೆ ತೆರಳಿ ನಟ ದರ್ಶನ್ ಅವರ ಆರೋಗ್ಯ ಪರೀಕ್ಷಿಸಿ, ಬಳಿಕ ವರದಿಯನ್ನು ಜೈಲಾಧಿಕಾರಿಗಳಿಗೆ ನೀಡಿದರು. ಬಳಿಕ ದರ್ಶನ್ ರನ್ನು ಪೊಲೀಸ್ ಬಿಗಿ ಬಂದೋಬಸ್ತ್​ ನಲ್ಲಿ ಬಿಮ್ಸ್ ಗೆ ಕರೆದೊಯ್ಯಲಾಯಿತು. ಇದಕ್ಕೂ ಮೊದಲು, ಜೈಲಿನಲ್ಲಿರುವಪತಿ ನಟ ದರ್ಶನ್​ರನ್ನು ಭೇಟಿಯಾಗಲು ಮಂಗಳವಾರ ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಜೊತೆ ಸುಮಾರು 20 ನಿಮಿಷ ಕಾಲ ಮಾತುಕತೆ ನಡೆಸಿದರು. ದರ್ಶನ್ ನೋಡಲು ಬಿಮ್ಸ್ ಆಸ್ಪತ್ರೆಯ ಮುಂಭಾಗ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರಲ್ಲದೆ, ದರ್ಶನ್ ಪರ ಘೋಷಣೆಗಳನ್ನು ಕೂಗಿದರು.

Comments (0)

Your email address will not be published. Required fields are marked *

Back to top button