ಕಾರವಾರ: ನಟ ದರ್ಶನ್ ರೇಣುಕಾ ಸ್ವಾಮಿ ಪ್ರಕರಣದಿಂದ ದೋಷಮುಕ್ತರಾಗಿ ಹೊರಗೆ ಬರಬೇಕೆಂದು ದರ್ಶನ್ ಸಹೋದರಿಯದ ದಿವ್ಯಾ ಪತಿ ಮಂಜುನಾಥ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿರುವ ಶನೇಶ್ವರ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಮಾಡಿದ್ದಾರೆ. ಚಿತ್ರನಟ ದರ್ಶನ ಪ್ರಕರಣದಿಂದ ಮುಕ್ತರಾಗಬೇಕೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಪ್ರಕರಣದಿಂದ ಬೇಗ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.
NPCIL ಕೈಗಾದಲ್ಲಿ ಉದ್ಯೋಗಿಯಾಗಿರುವ ನಟ ದರ್ಶನ ಬಾವ ಮಂಜುನಾಥ್ ಅವರು ದರ್ಶನ್‌ಗೆ ಒಳಿತಾಗಲಿ, ದೋಷಮುಕ್ತರಾಗಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.