Top Newsರಾಜ್ಯಸಿನಿಮಾಸುದ್ದಿ

ದರ್ಶನ್‌ಗೆ ಜಾಮೀನು ಮಂಜೂರು: ಹ್ಯಾಪಿ ನ್ಯೂಸ್ ಎಂದು ಸಂಭ್ರಮಿಸಿದ ರಕ್ಷಿತಾ ಪ್ರೇಮ್

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆ ಹ್ಯಾಪಿ ನ್ಯೂಸ್ ಎಂದು ನಟಿ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ನೀಡಿದ್ಧಾರೆ. ಹ್ಯಾಪಿ ನ್ಯೂಸ್, ಹ್ಯಾಪಿ ಡೇ ಎಂದು ದರ್ಶನ್‌ಗೆ ಜಾಮೀನು ಸಿಕ್ಕ ಖುಷಿಯನ್ನು ರಕ್ಷಿತಾ ಪ್ರೇಮ್ ಸಂಭ್ರಮಿಸಿದ್ದಾರೆ.

ಅಂದಹಾಗೆ, ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಹಲವು ವರ್ಷಗಳಿಂದ ಸ್ನೇಹಿತರು. ದರ್ಶನ್ ಜೊತೆಗೆ ಸುಂಟರಗಾಳಿ, ಕಲಾಸಿಪಾಳ್ಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸಂದರ್ಭದಲ್ಲಿ ರಕ್ಷಿತಾ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿ ಬಂದಿದ್ದರು.

Comments (0)

Your email address will not be published. Required fields are marked *

Back to top button