ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನ ಹೊಸ ಸೀಸನ್ ಶುರುವಾಗಲಿದೆ. ಈಗಾಗಲೇ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಡ್ಯಾನ್ಸ್‌ನ ಅ ಆ ಇ ಈ ಗೊತ್ತಿಲ್ಲದೆ ಇರೋರು ಕೂಡ ಈಲ್ಲಿ ಡ್ಯಾನ್ಸ್ ಮಾಡುತ್ತಿರೋದು ವಿಶೇಷ. ಈ ಹಿಂದೆಯೂ ಕೂಡ ಡ್ಯಾನ್ಸ್ ಬರದಿರೋರಿಗೆ ವೇದಿಕೆ ಮಾಡಿಕೊಟ್ಟ ಶೋಗಳನ್ನು ಕನ್ನಡದಲ್ಲಿ ನೋಡಿದ್ದೇವೆ.ಈಗ ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೆಲ ಜನಪ್ರಿಯ ವ್ಯಕ್ತಿಗಳು ಈ ಬಾರಿ ಹೇಗೆ ಡ್ಯಾನ್ಸ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಇನ್ನು ಈ ಡ್ಯಾನ್ಸ್ ನೆಪದಲ್ಲಿ ಸಿಕ್ಕಾಪಟ್ಟೆ ಮನರಂಜನೆ ಸಿಗೋದಂತೂ ಪಕ್ಕಾ. ನಟ ಶಿವರಾಜ್‌ಕುಮಾರ್, ನಟಿ ರಕ್ಷಿತಾ ಪ್ರೇಮ್, ಡ್ಯಾನ್ಸ್ ಮಾಸ್ಟರ್ ಚಿನ್ನಿ ಮಾಸ್ಟರ್, ವಿಜಯ್ ರಾಘವೇಂದ್ರ ಅವರು ಈ ಶೋನ ನಿರ್ಣಾಯಕರಾಗಿದ್ದಾರೆ. ರಕ್ಷಿತಾ ಪ್ರೇಮ್ ಅವರು ಈಗಾಗಲೇ ಪ್ರಸಾರ ಆಗಿರುವ ‘ಕಾಮಿಡಿ ಕಿಲಾಡಿಗಳು’ ಶೋ ಹಾಗೂ ಡ್ಯಾನ್ಸ್ ಶೋನ ಕೆಲ ಸೀಸನ್‌ಗಳ ನಿರೂಪಕರಾಗಿದ್ದರು. ವಿಜಯ್ ರಾಘವೇಂದ್ರ ಕೂಡ ಕೆಲ ಡ್ಯಾನ್ಸ್ ಶೋ, ಡ್ರಾಮಾ ಜ್ಯೂನಿಯರ್ಸ್ ಶೋನ ನಿರೂಪಕರಾಗಿದ್ದರು. ಈಗ ಅವರು ಮತ್ತೆ ಡಿಕೆಡಿ ವೇದಿಕೆಗೆ ಕಂಬ್ಯಾಕ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಅವರು ಈ ಬಾರಿ ಮತ್ತೆ ಡಿಕೆಡಿ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಸ್ಪರ್ಧಿಗಳ ಹೆಸರು ಕೇಳಿದ್ರೆ ನಿಜಕ್ಕೂ ಇವರೆಲ್ಲ ಡ್ಯಾನ್ಸ್ ಮಾಡ್ತಾರಾ? ಡ್ಯಾನ್ಸ್ ಬರತ್ತಾ ಇವರಿಗೆ ಅಂಥ ಕಂಗಾಲಾಗೋದು ಪಕ್ಕಾ. ಈ ಶೋನ ನಿರೂಪಕರು ಯಾರು ಎಂದು ರಿವೀಲ್ ಆಗಬೇಕಿದೆ.



