Friday, November 21, 2025
20 C
Bengaluru
Google search engine
LIVE
ಮನೆಜಿಲ್ಲೆಬ್ರಾö್ಯಂಡೆಡ್ ಡ್ರೆಸ್ಸು...ಕೂಲಿಂಗ್‌ಗ್ಲಾಸು...ದಾಸನ ಮದ ಇಳಿದಿಲ್ಲ !

ಬ್ರಾö್ಯಂಡೆಡ್ ಡ್ರೆಸ್ಸು…ಕೂಲಿಂಗ್‌ಗ್ಲಾಸು…ದಾಸನ ಮದ ಇಳಿದಿಲ್ಲ !

ದರ್ಶನ್ ಪರಪ್ಪನ ಅಗ್ರಹಾರಕ್ಕೆ ಟಾಟಾ ಮಾಡಿ ಬಳ್ಳಾರಿಯತ್ತ ಓಟ ಕಿತ್ತಿದ್ದಾರೆ. ಕಾರಣ ಒಂದೇ ಒಂದು ಸಿಗರೇಟು…ಒಂದು ಕಪ್ ಕಾಫಿ. ಪರಪ್ಪನ ಅಗ್ರಹಾರವನ್ನು ರೆಸಾರ್ಟ್ ಎಂದು ತಿಳಿದುಕೊಂಡಿದ್ದರ ಪರಿಣಾಮ ಈಗಲ್ಲ…ಇನ್ನು ಮುಂದೆ ಉಣ್ಣಲಿದ್ದಾರೆ. ಅದು ಎರಡೂ ಕೈಗಳಿಂದ. ಬೇಕಿತ್ತಾ ನಂಗಿದೆಲ್ಲ…? ಹೀಗಂತ ಒಳಗೊಳಗೆ ಕೊರಗುತ್ತಿದ್ದಾರೆ ದಚ್ಚು. ಆದರೆ ಹೊರಗೆ ಮಾತ್ರ `ಐಯಾ ಬಿಂದಾಸ್’ ಪೋಸ್ ಕೊಡುತ್ತಿದ್ದಾರೆ. ಅದಕ್ಕೆ ಸಾಕ್ಷಿ…ಬ್ರಾö್ಯಂಡೆಡ್ ಟೀಶರ್ಟ್, ಜೀನ್ಸ್ ಅಂಡ್ ಕೂಲಿಂಗ್‌ಗ್ಲಾಸ್. ಮದ ಇಳಿದಿಲ್ಲವಾ ಸಾರಥಿ ? ಖಾಕಿ ಕೆಂಡಾಮAಡಲವಾಗಿದೆ…

ದರ್ಶನ್ ಇನ್ನೂ ಆರೋಪಿ. ಕೊಲೆಗಾರನ ಪಟ್ಟ ಸಿಕ್ಕಿಲ್ಲ. ಆದರೂ ಬಳ್ಳಾರಿ ಜೈಲಿಗೆ ಹೋಗುವ ಮುನ್ನ ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದಾರೆ. ಕೊರಳಲ್ಲಿ ಚಿನ್ನದ ಸರ. ಕೈಗೆ ಬೆಳ್ಳಿ ಕಡಗ. ಎಡಗೈಗೆ ಬೆಡ್‌ಶೀಟ್ ಸುತ್ತಿಕೊಂಡಿದ್ದರು. ಕಾರಣ ಅಲ್ಲಿಗೆ ಕೋಳ ಹಾಕಲಾಗಿತ್ತು. ಆದರೆ ಅದು ಚಿನ್ನದ್ದಲ್ಲ, ಬೆಳ್ಳಿಯದ್ದೂ ಅಲ್ಲ. ಪಕ್ಕಾ ಸರ್ಕಾರಿ ಕಬ್ಬಿಣದ ಬಳೆ. ಅದನ್ನು ಮುಚ್ಚಿಕೊಂಡು ಬಳ್ಳಾರಿ ಜೈಲಿನ ಕದ ತಟ್ಟಿದರು. ಅಷ್ಟರಲ್ಲಿ ಇವರನ್ನು ಬರಮಾಡಿಕೊಳ್ಳಲು ಕಾದಿದ್ದ ಪೊಲೀಸರು, ದಚ್ಚು ಎಸ್ಕಾರ್ಟ್ಗೆ ನೀರಿಳಿಸಿದ್ದಾರೆ. ಆರೋಪಿಗೆ ಕೂಲಿಂಗ್‌ಗ್ಲಾಸ್ ಕೊಟ್ಟಿದ್ದೇಕೆ ? ಪ್ರಶ್ನೆ ಮುಂದಿಟ್ಟಿದ್ದಾರೆ.

ಒಬ್ಬ ಕೊಲೆ ಆರೋಪಿಯನ್ನು ಈ ರೀತಿಯಾಗಿ ಕರೆದುಕೊಂಡು ಜೈಲಿಗೆ ಬಂದರೆ ನಮ್ಮ ಮಾನ ಮರ್ಯಾದೆ ಏನಾಗಬೇಕು ? ಎಲ್ಲ ಆರೋಪಿಗಳಿಗೆ ಇದೇ ರೀತಿಯ ಸವಲತ್ತು ಅಥವಾ ರಿಯಾಯಿತಿ ನೀಡುತ್ತೀರಾ ಎಂದು ಬೆಳಗಾವಿ ಜೈಲು ಇಲಾಖೆ ಡಿಐಜಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಹೀಗೆ ಅವಕಾಶ ಕೊಟ್ಟ ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ. ಇದನ್ನು ನೋಡಿ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ. ಪರಪ್ಪನ ಅಗ್ರಹಾರದಿಂದ ದರ್ಶನ್‌ಗೆ ಗೇಟ್‌ಪಾಸ್ ಕೊಟ್ಟಿದ್ದೇ ಇಂಥ ನವರಂಗಿ ಆಟಗಳಿಂದ. ಅದು ಗೊತ್ತಿದ್ದೂ ಸಿಬ್ಬಂದಿ ಹೀಗೆ ಮಾಡಿದರೆ ಏನನ್ನೇಬೇಕು ? ನೀವೇ ನಿರ್ಧರಿಸಿ…

ಹಗಗಲ್ಲಿ ದರ್ಶನ್ ಪಯಣ ಮಾಡೋದು ಸೂಕ್ತ ಅಲ್ಲ. ಈ ಕಾರಣಕ್ಕೆ ಪರಪ್ಪನ ಅಗ್ರಹಾರದಿಂದ ಬೆಳಿಗ್ಗೆ ನಾಲ್ಕೂವರೆ ಸುಮಾರಿಗೆ ಬಳ್ಳಾರಿಯತ್ತ ಹೊರಟಿತು ಪೊಲೀಸ್ ವ್ಯಾನು. ಮಾಧ್ಯಮ ಹಾಗೂ ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಲು ಏನೇನೊ ಆಟಗಳನ್ನು ಆಡಲಾಯಿತು. ಕಾರಿನಿಂದ ವ್ಯಾನಿಗೆ ದರ್ಶನ್‌ರನ್ನು ಬದಲಿಸಲಾಯಿತು. ಮತ್ತೆ ಕಾರಿನ ನಂಬರ್ ಪ್ಲೇಟ್ ಆಗಾಗ ಚೇಂಜ್ ಮಾಡಿದರು. ಇದರ ಜೊತೆಗೆ ಚಿತ್ರದುರ್ಗದ ದಾರಿಯನ್ನು ಬಿಟ್ಟು ಆಂಧ್ರದ ಗಡಿಯನ್ನು ಪ್ರವೇಶಿಸಿತು ದರ್ಶನ್ ವ್ಯಾನು. ಅಲ್ಲಿಂದ ಬಳ್ಳಾರಿ ಜೈಲಿನ ಅಂಗಳಕ್ಕೆ ತಂದು ನಿಲ್ಲಿಸಿದರು.

ಹೆಚ್ಚು ಕಮ್ಮಿ ಹತ್ತು ಗಂಟೆ ಹೊತ್ತಿಗೆ ದರ್ಶನ್ ಜೈಲಿನ ಅಂಗಳದಲ್ಲಿ ನಿಂತಿದ್ದರು. ಇವರನ್ನು ಸ್ವಾಗತ ಕೋರಲು ಇನ್ನಾರು ಬರಬೇಕು ? ಒನ್ಸ್ ಅಗೇನ್ ದರ್ಶನ್ ಅಂಧಾಭಿಮಾನಿಗಳು ಹಾಜರಿದ್ದರು. ಕಾರ್ಗಿಲ್ ಯುದ್ಧದಲ್ಲಿ ಗೆದ್ದು ಬಂದ ಯೋಧನೋ ಎನ್ನುವಂತೆ ಅರಚಾಡುತ್ತಿದ್ದರು. `ಬೆಂಗಳೂರಿಗೆ ಹೋಗಿ ನೋಡಲು ಆಗಲ್ಲ…ಇಲ್ಲೇ ಬಂದಿದ್ದಾರೆ…ನೋಡೋಣ…’ ಹೀಗಂತ ಅನೇಕ ಫ್ಯಾನ್ಸ್ ಜೈಲಿನ ಅಂಗಳದಲ್ಲಿ ಬೀಡು ಬಿಟ್ಟಿದ್ದರು. ಬಹುಶಃ ಇದೆಲ್ಲ ಅರಿವಿದ್ದೇ ಏನೊ…ದರ್ಶನ್ ಬ್ಲಾö್ಯಕ್ ಟೀ ಶರ್ಟ್…ನೀಲಿ ಜೀನ್ಸ್…ಕೊರಳಿಗೆ ಕೂಲಿಂಗ್ ಗ್ಲಾಸ್ ನೇತು ಹಾಕಿಕೊಂಡಿದ್ದರೇನೊ…

ಇದು ನೋಡಿ ನಮ್ಮ ದೇಶದ ದುರಂತ. ಒಬ್ಬ ನರಪೇತಲ ವ್ಯಕ್ತಿಯನ್ನು ಹದಿನೇಳು ಮಂದಿ ಬರ್ಬರವಾಗಿ ಹತ್ಯೆ ಮಾಡಿದ್ಧಾರೆ. ಅದಕ್ಕೆಲ್ಲ ದರ್ಶನ್ ಕುಮ್ಮಕ್ಕು ನೀಡಿದ್ದಾರೆ. ಪವಿತ್ರಾ ಗೌಡ ಎನ್ನುವ ಎಕ್ಸ್ಟ್ರಾ ಲೈಟಿಗಾಗಿ ಒಂದು ಮನೆಯ ದೀಪವನ್ನೇ ಆರಿಸಿದೆ ಈ ಗ್ಯಾಂಗ್. ಇಷ್ಟೆಲ್ಲ ಗೊತ್ತಿದ್ದರೂ ಈತನ ಫ್ಯಾನ್ಸು ಬೀದಿಯಲ್ಲಿ ನಿಂತು ಗಂಟಲ ನರ ಕಿತ್ತುಕೊಳ್ಳುತ್ತಿದ್ದಾರಲ್ಲ…ಇವರನ್ನು ಯಾರಾದರೂ ಮಾನವೀಯತೆ ಇರುವ ಮನುಷ್ಯರು ಎನ್ನುತ್ತಾರಾ ? ಇವರ ಮನೆಯಲ್ಲಿಯೇ ಯಾರಿಗಾದರೂ ರೇಣುಕಾ ಗತಿ ಬಂದಿದ್ದರೆ ಇದೇ ರೀತಿ ಊಳಿಡುತ್ತಿದ್ದರಾ ? ಅವರೇ ಪ್ರಶ್ನೆ ಮಾಡಿಕೊಂಡು ಮುಚ್ಚಿಕೊಂಡಿರಬೇಕು…

ಮತ್ತೆ ಬಳ್ಳಾರಿ ಜೈಲಿಗೆ ಬನ್ನಿ. ಇನ್ನು ಮುಂದೆ ದರ್ಶನ್ ಇದೇ ವಠಾರದಲ್ಲಿ ಕುಂಟಾಬಿಲ್ಲೆ ಆಡಬೇಕು. ಹಾಗಂತ ಎಲ್ಲರ ಜೊತೆ ಮಿಂಗಲ್ ಆಗುವಂತಿಲ್ಲ. ಇನ್ನೇನಿದ್ದರೂ ಸಿಂಗಲ್ ಶಾಟ್ ಸಿನಿಮಾ. ನೂರೈವತ್ತು ವರ್ಷದ ಇತಿಹಾಸವಿರುವ ಜೈಲಿನಲ್ಲಿ ನಟೋರಿಯಸ್ ಖೈದಿಗಳನ್ನು ಇಡಲಾಗುತ್ತದೆ. ಭೀಮಾತೀರದ ಹಂತಕರು ಸೇರಿದಂತೆ ಅನೇಕ ವಿಕೃತ ಜೀವಿಗಳ ಪಾದದ ಧೂಳು ಇಲ್ಲಿ ಹರಿದಾಡಿದೆ. ಈಗ ಅದೇ ನೆಲದಲ್ಲಿ ರೇಣುಕಾ ಹತ್ಯೆಯಲ್ಲಿ ಪರಮ ವೀರ ಚಕ್ರ ಪಡೆದ ನಮ್ಮ ಪ್ರೀತಿಯ ರಾಮು ದಣಿವಾರಿಸಿಕೊಳ್ಳಲಿದ್ದಾರೆ.

ನಟೋರಿಯಸ್ ಕ್ರಿಮಿನಲ್ಸ್ಗಾಗಿ ಸ್ಪೆಶಲ್ ಸೆಲ್‌ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಹದಿನೈದು ಸೆಲ್ ಖಾಲಿ ಹೊಡೆಯುತ್ತಿವೆ. ಅದೇ ಸಾಲಿನ ಕೊನೇ ಸೆಲ್‌ನಲ್ಲಿ ದರ್ಶನ್‌ಗೆ ಚಾಪೆ ದಿಂಬು ಕೊಡಲಾಗಿದೆ. ಸಿಸಿ ಕ್ಯಾಮೆರಾ ಸದಾ ಆನ್ ಆಗಿರುತ್ತದೆ. ದಾಸನ ದೇಖರೇಕಿಗಾಗಿ ಮೂವರು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತಿರುತ್ತಾರೆ. ಅವರ ಎದೆ ಭಾಗದಲ್ಲಿ ಕ್ಯಾಮೆರಾ ಅಳವಡಿಸಿರುತ್ತಾರೆ. ದರ್ಶನ್ ಹಾಗೂ ಪೊಲೀಸ್ ನಡುವೆ ಏನೇ ಮಾತು ಕತೆ ನಡೆದರೂ ಅದು ದಾಖಲಾಗುತ್ತದೆ. ಮತ್ತದು ಕಟ್ ಕಟ್ ಆಗಿರಬಾರದು. ಹಾಗಿರುತ್ತದೆ. ದರ್ಶನ್ ಇನ್ ಟ್ರಬಲ್…

ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ ಊಟಕ್ಕಾಗಿ ಏನೆಂದು ಅರ್ಜಿ ಹಾಕಿದ್ದರು ? ನೆನಪಿದೆ ಅಲ್ಲವೆ ? `ನಂಗೆ ಜೈಲೂಟ ಸೇರುತ್ತಿಲ್ಲ. ರೋಗ ರುಜಿನ ಬರುವ ಸಾಧ್ಯತೆ ದಟ್ಟವಾಗಿದೆ. ಬೇದಿ ಕಿತ್ತುಕೊಂಡು ಬರುತ್ತಿದೆ. ಹೀಗಾಗಿ ಮನೆ ಊಟ ಕೊಡಿ ಮಹಾಸ್ವಾಮಿ…’ ಇದನ್ನೇ ನ್ಯಾಯಾಲಯದ ಮುಂದೆ ಪಲುಕಿದ್ದರು. ಜೈಲಾಧಿಕಾರಿಗಳೂ ಜಂಟಿ ನಾಟಕ ಮಾಡಿದ್ದರು. ಆದರೆ ಒಳಗೆ ಮಾತ್ರ ಬಿಸ್ಸಿಬಿಸಿ ಬಿರಿಯಾನಿ…ಚಾಕಣಾ…ಹೊಡೆಯುತ್ತಿದ್ದರು. ಈಗ ಅದಕ್ಕೆ ಕೆಲವು ತಿಂಗಳಾದರೂ ಕಡಿವಾಣ ಬೀಳಲಿದೆ. ಅಸಲಿ ಜೈಲೂಟವನ್ನು ಗಂಟಲಲ್ಲಿ ಇಳಿಸಬೇಕಾಗಿದೆ. ಎಷ್ಟು ದಿನ ಅನ್ನ ಇಲ್ಲದೆ ಇದ್ದಾರು ?

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಹಾಗೂ ಜೈಲಾಧಿಕಾರಿಗಳು ಮಾಡಿದ ನೌಟಂಕಿ ಎಲ್ಲರಿಗೂ ಗೊತ್ತಾಗಿದೆ. ಇದು ಒಂದು ರೀತಿ ಜನರನ್ನು ಮಾತ್ರ ಅಲ್ಲ, ನ್ಯಾಯಾಲಯವನ್ನೇ ಕುಚೇಷ್ಟೆಗೆ ಬಳಸಿಕೊಂಡ ಕೇಸು.
`ನಾನು ಒಳಗೆ ಎಲ್ಲರನ್ನೂ ಅಡ್ಜಸ್ಟ್ ಮಾಡಿಕೊಂಡು ಬಿರಿಯಾನಿ ತಿನ್ನುತ್ತೇನೆ…ಹೊರ ಜಗತ್ತಿಗೆ ಮಾತ್ರ ನವರಂಗಿ ದುನಿಯಾ ತೋರಿಸುತ್ತೇನೆ…’ ಎನ್ನುವುದೇ ಇವರೆಲ್ಲ ಸೇರಿ ಆಡಿದ ಆಟ. ಬಳ್ಳಾರಿಯಲ್ಲಿ ಈಗ ಅದೆಲ್ಲ ನಡೆಯಲ್ಲ. ದರ್ಶನ್ ಕುಂತುಕೊAಡ ಜಾಗದಲ್ಲೇ ಊಟದ ತಟ್ಟೆ…ಟೈಮಿಗೆ ಸರಿಯಾಗಿ ಬಂದು ಬೀಳುತ್ತದೆ. ಉಣ್ಣೋದು…ಬಿಡೋದು…ಅವರಿಷ್ಟ…ಕೇಳರ‍್ಯಾರು…? ದಿಕ್ಕಿಲ್ಲ ದೆಸೆಯಿಲ್ಲ…

ಸರ್ಕಾರ, ಮಾಧ್ಯಮ ಹಾಗೂ ಸಾರ್ವಜನಿಕರು…ಎಲ್ಲರೂ ಬಳ್ಳಾರಿ ಜೈಲಿನತ್ತ ಕಣ್ಣು ನೆಟ್ಟಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಆದಂಥ ಅವಘಡ ಅಲ್ಲಾಗುತ್ತದಾ ? ಕಾಯುತ್ತಿದ್ದಾರೆ. ಜೊತೆಗೆ ದರ್ಶನ್‌ಗೆ ಸಾಥ್ ಕೊಡಲು ಹೋಗಿ ಒಂಬತ್ತು ಮಂದಿ ಮನೆ ಮೂಲೆ ಸೇರಿದ್ದಾರೆ. ಇದೆಲ್ಲ ಬಳ್ಳಾರಿ ಸಿಬ್ಬಂದಿಗೆ ಗೊತ್ತಿದೆ. ಹೀಗಾಗಿ ಯಾರೂ ರಿಸ್ಕ್ ತೆಗೆದುಕೊಳ್ಳಲು ಹೋಗಲ್ಲ. ಕೆಲವು ತಿಂಗಳು ದರ್ಶನ್ ಆಕಾಶ ನೋಡುತ್ತಾ ಮಲಗಬೇಕಾಗಿದೆ. ಬೆಂಗಳೂರಿನಲ್ಲಿ ಸಿಕ್ಕಸಿಕ್ಕವರು ಭೇಟಿ ಮಾಡಲು ಹೋಗುತ್ತಿದ್ದರು. ಈಗ ಬಳ್ಳಾರಿಗೆ ಯಾರು ಕಾಲಿಡುತ್ತಾರೊ ? ನೋಡಬೇಕು.

ಬೆಂಗಳೂರು ತಂಪು…ತAಪು. ದೇಹ ಈ ವಾತಾವರಣಕ್ಕೆ ಹೊಂದಿಕೊAಡಿರುತ್ತದೆ. ಆದರೆ ಈಗ ಬಳ್ಳಾರಿ ಬಿಸಿಲಿಗೆ ಅನಿವಾರ್ಯವಾಗಿ ಬೆವರು ಸುರಿಸಬೇಕಾಗಿದೆ. ಮೊದಲೇ ಅದು ಬಳ್ಳಾರಿ. ಸುತ್ತ ಬರೀ ಬಂಡೆ ಬಂಡೆ ಗುಡ್ಡ ಗುಡ್ಡ…ನೆಲವೋ ಕಾದ ಹಂಚು. ರೋಡಿನ ಡಾಂಬರ್ ಕೂಡ ಬಿಸಿಲಿಗೆ ಕರಗಿ ಹರಿಯುತ್ತದೆ. ಎಸಿ ಇದ್ದರೂ ದೇಹ ಆವಿಯಾಗುತ್ತಿರುತ್ತದೆ. ಈಗ ಅಂಥದ್ದೇ ಕೆಂಡದ ಮಣ್ಣಿನಲ್ಲಿ ದರ್ಶನ್ ಬದುಕು ನಡೆಸಬೇಕಾಗಿದೆ. ಈಗೇನೋ ಚಳಿಗಾಲ..ಬೇಸಿಗೆ ಬರಲಿ…ಆಗ ನೋಡಿ…ಬರಲಾರದ ಜಾಗಗಳಿಂದ ನೀರು ಬಸಿಯುತ್ತದೆ. ಪರಪ್ಪ ಹೀಗೆ ಗೂಟಾ ಇಡುತ್ತಾನೆಂದು ದಚ್ಚು ತಿಳಿದಿರಲಿಲ್ಲವೇನೊ…ಶಾಂತA ಪಾಪಂ…ಶಾAತA ಪಾಪಂ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ

 

 

 

 

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments