ಬಿಬಿಎಂಪಿ ಅಂದ್ರೆ ಅದು ಭ್ರಷ್ಟರ ಕೊಂಪೆ, ನುಂಗುಬಾಕರ ಸಂತೆ ಅನ್ನುವ ಮಾತಿದೆ. ಆದರೆ ಇಂಥಾ ಅಡ್ಡೆಗೆ ಖಡಕ್ ಅಧಿಕಾರಿಯೊಬ್ಬರು ನುಗ್ಗಿದರೆ ಎಲ್ಲವೂ ಬದಲಾವಣೆ ಆಗುತ್ತೆ, ಸುಧಾರಣೆ ಆಗುತ್ತೆ ಅನ್ನೋದು ಇದೀಗ ಮತ್ತೆ ಸಾಬೀತಾಗಿದೆ. ಬಿಬಿಎಂಪಿಯಲ್ಲಿ ಹಲವು ದಕ್ಷ ಅಧಿಕಾರಿಗಳು ಕೂಡ ಕೆಲಸ ಮಾಡಿ ಹೋಗಿದ್ದಾರೆ. ಈಗ ಇನ್ನೊಬ್ಬ ಅಧಿಕಾರಿ ಬಿಬಿಎಂಪಿಯಲ್ಲಿ ತಮ್ಮ ಖದರ್ ತೋರಿಸಿ ಬಿಬಿಎಂಪಿ ಅಂದ್ರೆ ಅದು ಭ್ರಷ್ಟರ ತಾಣವಲ್ಲ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಇಂಥಾ ಸಾಧನೆ ಮಾಡಿರುವುದು ಮುನೀಶ್ ಮೌದ್ಗಿಲ್.
ಮುನೀಶ್ ಮೌದ್ಗಿಲ್ ಅವರು ಮೊದಲಿನಿಂದಲೂ ಖಡಕ್ ಅಧಿಕಾರಿ. ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುನೀಶ್ ಮೌದ್ಗಿಲ್ ಕಂದಾಯ ತೆರಿಗೆ ಸಂಗ್ರಹದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವರ್ಷ ಮುನೀಶ್ ಮೌದ್ಗಿಲ್ ಅವ್ರ ನೇತೃತ್ವದ ಟೀಂ ರಾಜಧಾನಿಯ ಆಸ್ತಿ ತೆರಿಗೆಯಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಪ್ರಸಕ್ತ ವರ್ಷ ಜುಲೈ ಅಂತ್ಯದವರೆಗೂ ಬರೋಬ್ಬರಿ ₹3200 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಬರೋಬ್ಬರಿ 800 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಕೇವಲ 10-12 ದಿನದಲ್ಲೇ ಬರೋಬ್ಬರಿ ₹1200 ಕೋಟಿ ಸಂಗ್ರಹಿಸಿರೋದು ಮುನೀಶ್ ಮೌದ್ಗಿಲ್ ಅವ್ರ ಸಾಮರ್ಥ್ಯಕ್ಕೆ ಇನ್ನೊಂದು ಉದಾಹರಣೆ. ಒನ್ ಟೈಮ್ ಸೆಟೆಲ್ಮೆಂಟ್ ಯೋಜನೆಯಲ್ಲಿ 1.2 ಲಕ್ಷ ಆಸ್ತಿ ತೆರಿಗೆ ಬಾಕಿದಾರರು ಈ ಬಾರಿ ₹380 ಕೋಟಿ ಆಸ್ತಿ ತೆರಿಗೆ ಕಟ್ಟಿದ್ದಾರೆ.
ಮುನೀಶ್ ಮೌದ್ಗಿಲ್ ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತರಾಗಿ ಮಾಡಿರೋ ಮಹತ್ತರ ಸಾಧನೆಗೆ ಅವರು ಸಂಗ್ರಹಿಸಿರೋ ಈ ಟ್ಯಾಕ್ಸ್ ಮೊತ್ತವೇ ಸಾಕ್ಷಿ. ಮುನೀಶ್ ಮೌದ್ಗಿಲ್ ಅವರು 1998ರ ಬ್ಯಾಚ್ನ ಐಎಎಸ್ ಅಧಿಕಾರಿ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದರು. ಮುನೀಶ್ ಮೌದ್ಗಿಲ್ ಅವರು ಈ ಹಿಂದೆ ಸರ್ವೆ, ಸೆಟ್ಲ್‌ಮೆಂಟ್ ಮತ್ತು ಭೂ ದಾಖಲೆಗಳ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದಾರೆ. ಜೂನ್ 2008 ರಿಂದ ಜೂನ್ 2009 ರವರೆಗೆ ರಾಮನಗರ ಜಿಲ್ಲಾಧಿಕಾರಿ ಕೂಡ ಆಗಿದ್ದರು.
ಮುನೀಶ್ ಮೌದ್ಗಿಲ್ ಅವರು ಐಎಎಸ್ ವಲಯದಲ್ಲಿ ಸಿಂಗಂ ರೀತಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರ ಪತ್ನಿ ರೂಪಾ ಮೌದ್ಗಿಲ್. ಇವರಂತೂ ಲೇಡಿ ಸಿಂಗಂ. ಐಪಿಎಸ್ ಅಧಿಕಾರಿಯಾಗಿರೋ ರೂಪಾ ಮೌದ್ಗಿಲ್ ಕೂಡ ಖಡಕ್ ಪೊಲೀಸ್ ಆಫೀಸರ್.. ಪ್ರತಿ ಮುನೀಶ್ ಯಶಸ್ಸಿಗೆ ಬೆನ್ನಾಗಿ ನಿಂತಿದ್ದು ಇದೇ ರೂಪಾ ಮೌದ್ಗಿಲ್. ಹಾಗೇ ಪತ್ನಿ ರೂಪಾ ಯಶಸ್ಸಿಗೂ ಮುನೀಶ್ ಮೌದ್ಗಿಲ್ ಕಾರಣ.