#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜ್ಯವಿಶೇಷಸಿನಿಮಾಸುದ್ದಿ

ಡಿ ಬಾಸ್​ ಹೊಸ ಸಿಗ್ನಲ್‌ ! ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು?

ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದಲೇ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಸಂದೇಶ ಕೊಟ್ಟಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾನೇ ಕರೆಯುತ್ತಾರೆ. ಇಂದು ಬಳ್ಳಾರಿ ಜೈಲಿಗೆ ಸ್ನೇಹಿತರು ಭೇಟಿ ಕೊಡಲು ಬಂದಾಗ ಸೆಲೆಬ್ರಿಟಿಗಳನ್ನ ನೋಡಿ ಸಿಗ್ನಲ್ ಮಾಡಿದ್ದಾರೆ.

ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಮುಂದುವರಿದಿದೆ. ದರ್ಶನ್ ಪರ ವಕೀಲರು ಹೇಗಾದ್ರು ಮಾಡಿ ಜಾಮೀನು ಕೊಡಿಸಲು ನಿರಂತರ ಹೋರಾಟ ಮಾಡುತ್ತಿದ್ದಾರೆ. ದರ್ಶನ್ ಪರ ವಕೀಲರ ವಾದಕ್ಕೆ SPP ಪ್ರಸನ್ನ ಕುಮಾರ್ ಅವರು ಖಡಕ್ ಆದ ಪ್ರತಿವಾದ ಮಂಡಿಸುತ್ತಿದ್ದಾರೆ. ಈ ವಾದ, ಪ್ರತಿವಾದದಲ್ಲಿ ಜಾಮೀನು ಸಿಗುತ್ತಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

 

ಜೈಲು ಸಿಬ್ಬಂದಿ ಭದ್ರತೆಯಲ್ಲಿ ಸೆಲ್‌ನಿಂದ ದರ್ಶನ್ ಅವರು ಹೊರಗೆ ಬಂದ ನಂತರ, ಎಂದಿನಂತೆ ಬ್ಯಾಗ್ ಹಿಡಿದು ಸೆಲ್‌ನಿಂದ ಬಂದ ದರ್ಶನ್ ಅವರು ಜೈಲಿನ ಹೊರಗೆ ನಿಂತಿದ್ದ ಅಭಿಮಾನಿಗಳನ್ನು ನೋಡಿದರು. ಅಭಿಮಾನಿಗಳ ಘೋಷಣೆಯನ್ನು ಗಮನಿಸಿದ ದರ್ಶನ್ ಅವರು ಕೈ ಸನ್ನೆಯಲ್ಲಿ ವಿಶೇಷ ಸಂದೇಶವನ್ನು ಕೊಟ್ಟಿದ್ದಾರೆ.

ಹೈ ಸೆಕ್ಯೂರಿಟಿ ಸೆಲ್‌ನಿಂದ ಬರುವ ದರ್ಶನ್ ನೋಡಲು ಜೈಲಿನ ಗೇಟ್ ಮುಂಭಾಗದಲ್ಲಿ ಅಭಿಮಾನಿಗಳು ದಂಡು ಕಾಯುತ್ತಾ ನಿಂತಿದ್ದರು. ದರ್ಶನ್ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಬಾಸ್, ಬಾಸ್ ಡಿ ಬಾಸ್ ಅಂತಾ ಘೋಷಣೆ ಕೂಗಿದರು. ಅಭಿಮಾನಿಗಳ ಘೋಷಣೆ ಕೇಳಿ ಖುಷ್ ಆದ ದರ್ಶನ್ ಅವರು ಅಭಿಮಾನಿಗಳ ಘೋಷಣೆಗೆ ಕೈ‌ಸನ್ನೆ ಮಾಡಿ ಡೋಂಟ್ ವರಿ ಚಿನ್ನ  ನಾನು ಚೆನ್ನಾಗಿದ್ದೇನೆ ಅನ್ನೋ ಸಂದೇಶ ನೀಡುವುದರ ಜೊತೆಗೆ ಚಿನ್ನ ನೀವು ಹೃದಯದಲ್ಲಿ ಇದ್ದಿರಿ, ಅನ್ನೋತರ ಕೈ ಸನ್ನೆ ಮಾಡಿ ಮುಗುಳ್ನಕ್ಕರು. ಅಭಿಮಾನಿಗಳು ಅಂದರೆ ದರ್ಶನ್ ಅವರಿಗೆ ಪ್ರಾಣ ನನ್ನ ಸೆಲೆಬ್ರೆಟೀಸ್​​ ಅಂತ ಎದೆ ಮೆಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ.ಅವರ ಅಭಿಮಾನಿಗಳು ಅಷ್ಟೇ ದರ್ಶನ್ ಅವರ ಹೆಸರನ್ನು ಕೋಟ್ಯಾಂತರ ಅಭಿಮಾನಿಗಳು ಅವರ ಹೆಸರು ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

 

ಎದೆ ಮುಟ್ಟಿ ಅಭಿಮಾನಿಗಳತ್ತ ಕೈ ತೋರಿದ ದರ್ಶನ್ ಅವರು ನನ್ನ ಹೃದಯಲ್ಲಿ ನೀವು ಇದ್ದೀರಾ ಅಂತಾ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಬಳಿಕ ಸಂದರ್ಶಕರ ಕೊಠಡಿಗೆ ತೆರಳಿದ ದರ್ಶನ್ ಅವರು ಜೈಲಿಗೆ ಆಗಮಿಸಿದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಶೈಲಜಾ ನಾಗ್ ಇತರರನ್ನು ಭೇಟಿ ಮಾಡಿದರು.

Comments (0)

Your email address will not be published. Required fields are marked *

Back to top button