ಬಾಗಲಕೋಟೆ: ಪೊಲೀಸ್ ಕ್ವಾಟರ್ಸ್ನಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಹೆಡ್ ಕಾನ್ಸ್ಟೆಬಲ್ ಒಬ್ಬರಿಗೆ ಸುಟ್ಟ ಗಾಯವಾದ ಘಟನೆ ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ನಡೆದಿದೆ. ಮನೆಯ ಹೊರವಲಯದಲ್ಲಿ ಸಿಲಿಂಡರ್ ಇರಿಸಲಾದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಬನಹಟ್ಟಿ ಪೊಲೀಸ್ ಠಾಣೆಯ ಕ್ವಾಟರ‍್ಸ್ನ ಸೇಕೆಂಟ್ ಫ್ಲೋರ್ ಮನೆ ನಂ.9 ರಲ್ಲಿ ಬಿಸಿ ನೀರಿಗಾಗಿ ಸಿಲಿಂಡರ್‌ನ್ನು ಸಣ್ಣ ಒಲೆಯನ್ನು ಉರಿಸುವ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನಂದಿಸಲು ಯತ್ನಿಸಿದ ಮನೆಯವರಾದ ಎಸ್.ಆರ್. ದಳವಾಯಿ ಪ್ರಯತ್ನಿಸುತ್ತಿದ್ದಂತೆ ತನ್ನ ಬೆಂಕಿಯ ಕೆಣ್ಣಾಲಿಗೆ ಹೆಚ್ಚು ಆವರಿಸಿದೆ. ಇದಾದ ಐದಾರು ನಿಮಿಷಕ್ಕೆ ಸಿಲಿಂಡರ್ ಸ್ಪೋಟಗೊಂಡು ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದಷ್ಟೇ ಅಲ್ಲದೆ ಸ್ಪೋಟದ ರಭಸಕ್ಕೆ ಕಟ್ಟಡ ಒಡೆದಿದೆ. ಕೂಗಳತೆಯಲ್ಲಿಯೇ ಇದ್ದ ಅಗ್ನಿಶಾಮಕವು ತಕ್ಷಣ ಆಗಮಿಸುವ ಮೂಲಕ ಬೆಂಕಿ ಕೆನ್ನಾಲಿಗೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
ಅಗ್ನಿಶಾಮಕ ವಾಹನ ತಕ್ಷಣಕ್ಕೆ ಬಂದು ಬೆಂಕಿ ನಂದಿಸಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


