ಸುದ್ದಿ

ಕನ್ನಡ ಅಭಿವೃದ್ಧಿ ಅನುದಾನ ದುರುಪಯೋಗಕ್ಕೆ ಕಡಿವಾಣ; ಪಾರದರ್ಶಕತೆಗೆ ಸಿಎಂ ಕಠಿಣ ಸೂಚನೆ

ಕನ್ನಡದ ಹೆಸರಿನಲ್ಲಿ ವಿದೇಶಗಳಲ್ಲಿ ನಡೆಯುತ್ತಿರುವ ಕೆಲವು ಕಾರ್ಯಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸುಮಾರು 300 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನವನ್ನು ಕೆಲವರು ಉದ್ದೇಶಪೂರಿತವಾಗಿ ಬಳಸದೆ ವೈಯಕ್ತಿಕ ಹಾಗೂ ವಂಶಪಾರಂಪರ್ಯ ಹಿತಾಸಕ್ತಿಗಳಿಗೆ ಬಳಸುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರ-ಪ್ರಸಾರಕ್ಕಾಗಿ ನೀಡಲಾಗುವ ಅನುದಾನವು ಪಾರದರ್ಶಕವಾಗಿ ಹಾಗೂ ನಿಯಮಾನುಸಾರವಾಗಿ ಬಳಸಲ್ಪಡಬೇಕು ಸ್ಪಷ್ಟಪಡಿಸಿದರು.

ಅನುದಾನ ಪಡೆಯುವ ಸಂಘಟನೆಗಳು ನಿಜವಾದ ಕನ್ನಡ ಸೇವೆಯನ್ನು ಕೈಗೊಳ್ಳಬೇಕು; ಸರ್ಕಾರದ ನೆರವು ಯಾವುದೇ ರೀತಿಯ ದುರುಪಯೋಗಕ್ಕೆ ಒಳಪಡುವಂತಿಲ್ಲ ಕನ್ನಡದ ಅಭಿವೃದ್ದಿ ಹೆಸರಿನಲ್ಲಿ ವೈಯಕ್ತಿಕ ಪ್ರಚಾರ ಅಥವಾ ಅಪ್ರಸ್ತುತ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂಬುದನ್ನೂ ಎಚ್ಚರಿಸಿದರು.

ರಾಜ್ಯ ಸರ್ಕಾರ ಕನ್ನಡದ ಸಾಂಸ್ಕೃತಿಕ ಮತ್ತು ಭಾಷಾ ಅಭಿವೃದ್ಧಿಗೆ ಬದ್ಧವಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಂಘಟನೆಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಕನ್ನಡದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಫಸರಿಸಲು ಸಮನ್ವಯ ಮತ್ತು ಜವಾಬ್ದಾರಿತನ ಅಗತ್ಯವೆಂದು ಅಭಿಪ್ರಾಯಪಟ್ಟರು.

Comments (0)

Your email address will not be published. Required fields are marked *

Back to top button