Wednesday, January 28, 2026
24.9 C
Bengaluru
Google search engine
LIVE
ಮನೆ#Exclusive Newsಕ್ರಿಕೆಟಿಗ ಇಶಾನ್ ಕಿಶನ್ ತಂದೆ ಜೆಡಿಯು ಪಕ್ಷಕ್ಕೆ ಸೇರ್ಪಡೆ !

ಕ್ರಿಕೆಟಿಗ ಇಶಾನ್ ಕಿಶನ್ ತಂದೆ ಜೆಡಿಯು ಪಕ್ಷಕ್ಕೆ ಸೇರ್ಪಡೆ !

ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಕ್ರಿಕೆಟಿಗ ಇಶಾನ್ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಅವರು ಭಾನುವಾರ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ(ಯುನೈಟೆಡ್) ಸೇರಿದ್ದಾರೆ.

ಜೆಡಿಯು ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಝಾ ಅವರು ಪ್ರಣವ್ ಪಾಂಡೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

“ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದ ಮೇಲಿನ ನಂಬಿಕೆಯಿಂದಾಗಿ ಪ್ರಣವ್ ಪಾಂಡೆ ಅವರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಇದು ವಿಶೇಷವಾಗಿ ಮಗಧ ಪ್ರದೇಶದಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ನೀಡಲಿದೆ ಎಂದು ಸಂಜಯ್ ಝಾ ಹೇಳಿದರು.

Cricketer Ishan Kishan's father Pranav Pandey joins JD(U) - The Tribune

ಜೆಡಿಯು ಸೇರಿದ ಬಳಿಕ ಮಾತನಾಡಿದ ಪಾಂಡೆ, “ನಾನು ಪಕ್ಷದ ಸೈನಿಕ ಮತ್ತು ಪಕ್ಷವನ್ನು ಬಲಪಡಿಸಲು ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತೇನೆ. ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಂತೋಷದಿಂದ ಸ್ವೀಕರಿಸಲು ಸಿದ್ಧನಿದ್ದೇನೆ ಎಂದರು.

ನವೆಂಬರ್ 13 ರಂದು ಬೆಳಗಂಜ್, ಇಮಾಮ್‌ಗಂಜ್, ರಾಮಗಢ ಮತ್ತು ತರಾರಿ ಎಂಬ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಹಾಲಿ ಶಾಸಕರು ಲೋಕಸಭೆಗೆ ಸದಸ್ಯರಾಗಿ ಆಯ್ಕೆಯಾದ ನಂತರ ತೆರವಾದ ಈ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments