ಮಂಡ್ಯ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲವು ಸಾಧಿಸಬೇಕೆಂದು ಯೋಗೇಶ್ವರ್ ಪತ್ನಿ ಶೀಲಾ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ. ಶ್ರೀಪಾದ್ ಆಚಾರ್ಯ ಎಂಬವರ ನೇತೃತ್ವದಲ್ಲಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮವನ್ನು ಶೀಲಾ ಯೋಗೇಶ್ವರ್ ನಡೆಸಿದ್ದಾರೆ. ಇತ್ತಿಚಿಗಷ್ಟೇ ಯೋಗೇಶ್ವರ್ ಸಹ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಳೆ ಆಂಜನೇಯಸ್ವಾಮಿಗೆ ಒಂದುಕಾಲು ರೂ. ಹರಕೆ ಕಟ್ಟಿದ್ದರು. ಇದೀಗ ಯೋಗೇಶ್ವರ್ ಪತ್ನಿ ಶೀಲಾ ಸಹ ಬೆಳಗ್ಗೆಯೇ ದೇವಸ್ಥಾನಕ್ಕೆ ಬಂದು ಆರಂಭದಲ್ಲಿ ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಹೋಮದಲ್ಲಿ ಭಾಗಿಯಾಗಿದ್ದಾರೆ. ಇದೀಗ ಪತ್ನಿ ಶೀಲಾ ಕೂಡ ವಿಶೇಷ ಹೋಮ ಮಾಡಿಸಿ ಪತಿ ಸಿಪಿವೈ ಗೆಲುವಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.