ಬೆಂಗಳೂರು: 6ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಹಳೇ ಪದಾಧಿಕಾರಿಗಳ ವಿರುದ್ಧ ಅಪರಾಧಿಕ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.
ಸಂಘದ ನಿವೃತ್ತ ಕಾರ್ಯ ದರ್ಶಿ ಎಸ್.ನಾಗರಾಜಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ದೂರು ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಸಂಘದ ಹಳೇ ಪದಾಧಿಕಾರಿಗಳಾದ ಎಂ.ರಮೇಶ್, ಯತಿ ರಾಜು, ಶಿವಣ್ಣ ಮುಂಜಾನೆ ಸತ್ಯ, ಕೆ.ರಾಘವೇಂದ್ರ, ಶಿವಕುಮಾರ್, ಸಚ್ಚಿದಾನಂದ ಕುರಗುಂದ, ಬಿ.ಎನ್. ಮೋಹನ್ ಕುಮಾರ್, ಎನ್. ವನಿತಾ, ಮಂಜುಶ್ರೀ ಕಡಕೋಳ ಹಾಗೂ ಕೆ.ಎಂ.ಪಂಕಜಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಲ್ಲರಿಗೂ ಸಮನ್ಸ್ ನೀಡಲು ಆದೇಶಿಸಿದೆ.
2023ರ ಸೆ.24ರಂದು ಸಂಘದ ಸರ್ವಸದಸ್ಯರ ಸಭೆಯ ಸುತ್ತೋಲೆಯಲ್ಲಿ ಸಂಘದ ಆಡಳಿತ ಮಂಡಳಿ ಪಗಳನ್ನು ದಾಖಲಿಸಿ, ಸದಸ್ಯರೆಲ್ಲರಿಗೂ ಹಂಚಲಾಗಿದೆ. ಈ ಆರೋಪಗಳಿಗೆ ನಾನು ನೀಡಿದ ಸ್ಪಷ್ಟನೆಯನ್ನು ಕಡೆಗಣಿಸಿ, ಏಕಪಕ್ಷೀಯವಾಗಿ ಸಂಘದ ಆಡಳಿತ ಮಂಡಳಿ ವರದಿ .ಯನ್ನು ಸರ್ವಸದಸ್ಯರ ಸಭೆಯಲ್ಲಿ ಆರೋಪಿತ ವ್ಯಕ್ತಿಗಳು ಮಂಡಿಸುವುದರ ಮೂಲಕ ನನ್ನ ಮಾನಹಾನಿಗೆ ಕಾರಣ ರಾಗಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎ.ಎಸ್.ನಾಗರಾಜಸ್ವಾಮಿ ಖಾಸಗಿ ದೂರು ದಾಖಲಿಸಿದ್ದರು. ದೂರುದಾರರ ಪರ ಹಿರಿಯ ವಕೀಲ ಸಿ. ಎಚ್.ಹನುಮಂತರಾಯ ವಕಾಲತ್ತು ವಹಿಸಿದ್ದಾರೆ.


