ಮನರಂಜನೆಲೈಫ್ ಸ್ಟೈಲ್ಸುದ್ದಿ

ಕಾರ್ಪೊರೇಟ್ ಉದ್ಯೋಗವನ್ನು ತೊರೆದು ನಟನೆಗೆ ಸೇರಿದ ನಟಿ ರಕ್ಷಿತಾ..!

Adi Lakshmi Purana Kannada Serial Episode Update; ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ-ನಟಿಯರು ಧಾರಾವಾಹಿಗಳಿಂದ ಅರ್ಧಕ್ಕೆ ಹೊರಬರುವುದು ಸಾಮಾನ್ಯವಾಗಿದೆ. ಆದರೆ, ಭರವಸೆಯ ನಟಿಯೊಬ್ಬರು ಕೈಯಲ್ಲಿದ್ದ ನಾಲ್ಕು ಕಾರ್ಪೊರೇಟ್ ಕೆಲಸಗಳನ್ನು ತ್ಯಜಿಸಿ ಬಣ್ಣದ ಲೋಕಕ್ಕೆ ಬಂದು, ಕೇವಲ ಮೂರೇ ತಿಂಗಳಿಗೆ ಧಾರಾವಾಹಿಯಿಂದ ಹೊರಬಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

‘ಆದಿಲಕ್ಷ್ಮಿ ಪುರಾಣ’ ಧಾರಾವಾಹಿಯಲ್ಲಿ ‘ಅಮೃತಾ’ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ರಕ್ಷಿತಾ ಅವರು ಈಗ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ರಕ್ಷಿತಾ ಅವರಿಗೆ ಅಭಿನಯದ ಜೊತೆಗೆ ವೃತ್ತಿಜೀವನದಲ್ಲೂ ಉತ್ತಮ ಅವಕಾಶಗಳಿದ್ದವು. ಅವರ ಕೈಯಲ್ಲಿ ಬರೋಬ್ಬರಿ ನಾಲ್ಕು ಕಂಪನಿಗಳ ಜಾಬ್ ಆಫರ್ ಲೆಟರ್‌ಗಳಿದ್ದರೂ, ನಟನೆಯ ಮೇಲಿನ ಆಸಕ್ತಿಯಿಂದ ಅವರು ಗ್ಲಾಮರ್ ಪ್ರಪಂಚ ಆರಿಸಿಕೊಂಡಿದ್ದರು.


ಸೀರಿಯಲ್ ಆರಂಭವಾಗಿ ಕೇವಲ ಮೂರು ತಿಂಗಳಷ್ಟೇ ಕಳೆದಿದೆ. ರಕ್ಷಿತಾ ಅವರು ಸೀರಿಯಲ್ ಬಿಡಲು ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ರಕ್ಷಿತಾ ಆಗಲಿ ಅಥವಾ ವಾಹಿನಿಯ ತಂಡವಾಗಲಿ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಹಿಂದೆ ‘ಮಧುಮಗಳು’ ಸೀರಿಯಲ್‌ನಲ್ಲಿ ನಟಿಸುವಾಗ ಓದಿನ ಬಗ್ಗೆ ಟೀಕೆಗಳು ಕೇಳಿಬಂದಾಗ, ಎರಡನ್ನೂ ಸಮರ್ಥವಾಗಿ ಬ್ಯಾಲೆನ್ಸ್ ಮಾಡಿದ್ದ ರಕ್ಷಿತಾ, ಈಗ ಹಠಾತ್ತನೆ ಈ ನಿರ್ಧಾರ ತಳೆದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


ರಕ್ಷಿತಾ ನಿರ್ಗಮಿಸಿದ ಬೆನ್ನಲ್ಲೇ ‘ಅಮೃತಾ’ ಪಾತ್ರಕ್ಕೆ ಹೊಸ ನಟಿಯ ಸೇರ್ಪಡೆಯಾಗಿದೆ. ‘ಪಾರು’ ಧಾರಾವಾಹಿ ಖ್ಯಾತಿಯ ಮಾನಸಿ ಜೋಶಿ ಅವರು ಇನ್ಮುಂದೆ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬದಲಾವಣೆಯ ಬಗ್ಗೆ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ನಮಗೆ ರಕ್ಷಿತಾ ಅವರೇ ಅಮೃತಾ ಪಾತ್ರಕ್ಕೆ ಸೂಕ್ತವಾಗಿದ್ದರು, ಅವರನ್ನೇ ಮುಂದುವರಿಸಬೇಕಿತ್ತು” ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.ನಟನೆಗಾಗಿ ಸಾಫ್ಟ್‌ವೇರ್ ಕೆಲಸವನ್ನೇ ಬಿಟ್ಟು ಬಂದಿದ್ದ ರಕ್ಷಿತಾ ಅವರ ಮುಂದಿನ ಪಯಣ ಎಲ್ಲಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

Comments (0)

Your email address will not be published. Required fields are marked *

Back to top button