ನಮಸ್ಕಾರ ದೇವ್ರು ಎಂದು ಮಾತನ್ನು ಆರಂಭಿಸುವ Dr Bro ಗಗನ್ ಅಂದರೆ ಅದೆಷ್ಟೋ ಯುವಕರ ಯುವತಿಯರ ನೆಚ್ಚಿನ ಹುಡುಗ. ವಯಸ್ಸಿನಲ್ಲಿ ಕಿರಿಯವರಾದರೂ ತಮ್ಮ ಚಾತುರ್ಯತೆಯಿಂದ ಎಲ್ಲರ ಮನಗೆದ್ದಿರುವ ಹುಡುಗ ಡಾಕ್ಟರ್ ಬ್ರೋ..ನೈಜ್ಯ ಸ್ವಾಭಾವದಿಂದಲೇ ವಿದೇಶವನ್ನ ವೀಡಿಯೋ ಬ್ಲಾಗರ್ ಮೂಲಕ ಪ್ರೇಕ್ಷಕರಿಗೆ ತೋರಿಸುತ್ತಾ ಅಲ್ಲಿನ ಐತಿಹಾಸಿಕ ಸ್ಥಳಗಳ ವಿವರಣೆ ನೀಡತ್ತಾ ವಿದೇಶವನ್ನು ತಮ್ಮ ಶೈಲಿಯಲ್ಲಿ ತೋರಿಸುವ ಕನ್ನಡದ ಹುಡುಗ.
ಅಫ್ಘಾನ್ ನೆಲದಲ್ಲಿ ತಾಲಿಬಾನ್ಗಳ ಎಡೆಯಲ್ಲಿ ಅಲ್ಲಿನ ಸ್ಥಿತಿ ಗತಿಗಳನ್ನ ಸ್ಪಷ್ಟ ಕನ್ನಡದೊಂದಿಗೆ ತಿಳಿಸುತ್ತ ಕರುನಾಡಲ್ಲಿ ಮನೆ ಮಾತಾಗಿದ್ದ Dr ಬ್ರೋ ಈಗ ಭಾರಿ ಚರ್ಚೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಕನ್ನಡ ಡಿಜಿಟಲ್ ಸ್ಪೇಸ್‌ನಲ್ಲಿ ಯೂಟ್ಯೂಬರ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಮಿತಿ ಮೀರಿ ಹುಟ್ಟಿಕೊಂಡಿವೆ. ಆದರೆ ನಿಜವಾಗಿಯೂ ನೋಡತಕ್ಕ ಕಂಟೆಂಟ್ ಹಾಕುವವರು ಬೆರಳೆಣಿಕೆಯ ಯೂಟ್ಯೂಬರ್‌ಗಳಷ್ಟೆ.
ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಹಾಕುವ ಜನಪ್ರಿಯ ಯೂಟ್ಯೂಬರ್ ಎಂದರೆ ಅದು ‘ಡಾ ಬ್ರೋ’. ಬಹಳ ವರ್ಷಗಳಿಂದಲೂ ಯೂಟ್ಯೂಬ್ ವಿಡಿಯೋಗಳನ್ನ ಮಾಡುತ್ತಿರುವ ಡಾ ಬ್ರೋ ನಿಜವಾದ ಹೆಸರು ಗಗನ್ ಆರಂಭದಲ್ಲಿ ಕರ್ನಾಟಕದ ಕೆಲ ವಿಶೇಷ ಸ್ಥಳದ ವಿಡಿಯೋ ಮಾಡಿ ಪರಿಚಯವಾದ ಗಗನ್ ಅಲ್ಪಾವಧಿಯಲ್ಲೇ ವಿದೇಶಕ್ಕೆ ಹೋಗಿ ಅಲ್ಲಿನ ವಸ್ತು ಸ್ಥಿತಿ ವಿವರಿಸಿ ಹೇಳುವ ಮೂಲಕ ನಮಸ್ಕಾರ ದೇವ್ರು ಅಂತಾನೆ ಫೇಮಸ್ ಆದರು.
ಗಗನ್ ಮಾತನಾಡೋ ಹಳ್ಳಿ ಸೊಗಡಿನ ಭಾಷೆ ಮತ್ತು ಚುರುಕಿನ ವೇಗ ಆತನಿಗೆ ಸಹಸ್ರಾರು ಅಭಿಮಾನಿಗಳನ್ನ ಹುಟ್ಟುಹಾಕಿತ್ತು. DR ಬ್ರೋ ಗಗನ್ ಲೆಫ್ಟಿಷ್ಟೋ ರೈಟಿಸ್ಟೋ ಸೆಂಟರಿಸ್ಟೊ ಅನ್ನೋ ಲೆಕ್ಕಾಚಾರ ಹಾಕೋದಕ್ಕೆ ಆತನ ಅಭಿಮಾನಿಗಳು ಇತ್ತೀಚಿಗೆ ಶುರುಮಾಡಿದ್ದಾರೆ. ಆತ ಅಫ್ಘಾನ್ ಗೆ ಹೋದಾಗ ಎಡಪಂಥೀಯ ಅಂತಾರೆ.. ಚೀನಾಗೆ ಹೋಗಿ ಚೀನಾ ದೇಶವನ್ನ ಹೊಗಳಿದಾಗ ಕಮ್ಯೂನಿಷ್ಟ್ ಅಂತಾರೆ…ಇನ್ನು ಭಾರತದಲ್ಲಿ ಯಾವುದಾದ್ರೂ ಹಿಂದೂ ದೇವಸ್ಥಾನ ಹೊಗಳಿದ್ರೆ, ಮುಸ್ಲಿಂ ವಿರೋಧಿ ಅಂತಾರೆ…ದರ್ಗಾಗೆ ಭೇಟಿ ಕೊಟ್ರೆ ಹಿಂದೂ ವಿರೋಧಿ ಅಂತಾರೆ.. ಸ್ವಲ್ಪ ಸೈಲೆಂಟ್ ಆದ್ರೆ, ನಾಪತ್ತೆ ಅಂತ ಮಾತಾಡ್ತಾರೆ.
ಒಟ್ನಲ್ಲಿ ಅವನು ಏನು ಮಾಡಿದ್ರು, ಪರ ವಿರೋಧದ ಚರ್ಚೆ ಇದ್ದೇ ಇರುತ್ತೆ. ಇದೀಗ ಆತನ ಮೇಲೆ ಎದ್ದಿರೋದು ಮತ್ತೊಂದು ಗಂಭೀರ ಆರೋಪ.. ಹೌದು..ಅದೇನಂದ್ರೆ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆ ಕುರಿತಂತೆ ಡಾ.ಬ್ರೋ ವಿಡಿಯೋ ಮಾಡಿದ್ದಾರೆ…ಇದಕ್ಕೊಂದು ರೂಮರ್ಸ್ ಸೃಷ್ಟಿಯಾಗಿದೆ ಅದೇನಪ್ಪ ಅಂದ್ರೆ, ಚೀನಾದಲ್ಲಿ ಡಾ. ಬ್ರೋ ಗೃಹಬಂಧನಕ್ಕೆ ಒಳಪಟ್ಟಿದ್ದ.. ಡಾ.ಬ್ರೋ ಹೆತ್ತವರು ಮೋದಿಯನ್ನ ಭೇಟಿಯಾಗಿ ಬಿಡಿಸುವಂತೆ ಕೋರಿಕೊಂಡಿದ್ರು, ಆಗ ಅಯೋಧ್ಯೆ ರಾಮನ ಬಗ್ಗೆ ವಿಡಿಯೋ ಮಾಡ್ಬೇಕು ಅನ್ನೋ ಷರತ್ತಿನ ಮೇಲೆ ಬಿಡಿಸಲಾಗಿದೆ ಅಂತಿದ್ದಾರೆ. ಈ ಹೇಳಿಕೆಗೂ ಬ್ರೋ ಅಯೋಧ್ಯೆ ವಿಡಿಯೋ ಮಾಡಿರೋದಕ್ಕೂ ಆತ ಬ್ರಾಹ್ಮಣರ ಹುಡುಗ ಅನ್ನೋದಕ್ಕೂ ಸಿಂಕ್ ಆಗಿಬಿಟ್ಟಿದೆ. ಅಷ್ಟೇ ಆತನಿಗೆ ಬಲಪಂಥೀಯ ಎಂಬ ಪಟ್ಟ ಕಟ್ಟಿ ನಿಶಬ್ಧ ಹಿಂದೂತ್ವವಾದಿ ಎಂಬ ಲೇಬಲ್ ಅಂಟಿಸಿಬಿಟ್ಟಿದ್ದಾರೆ.
ಈ ರೀತಿಯ ವಾದ ವಿವಾದಗಳು, ಪರ ವಿರೋಧದ ಚರ್ಚೆಗಳು ಇದೀಗ ಸಾಕಷ್ಟು ವೈರಲ್ ಆಗುತ್ತಿವೆ..ಗಗನ್ ಏನು ಮಾಡಿದರು ಏನು ಹೇಳಿದರು ಅದಕ್ಕೆ ಹೊಸ ರೂಪ ಕೊಟ್ಟು ಬೇರೆ ಬೇರೆ ರೀತಿಯ ಚರ್ಚೆಗೆ ಆತನ ಹೆಸರು ಬಳಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಯಾಸವೇ ಸರಿ. ಇನ್ನು ಡಾ.ಬ್ರೋ ರನ್ನ ಫ್ರೀಡಂ ಟಿವಿ ಸಂಪರ್ಕಿಸೋ ಯತ್ನ ಮಾಡಿದ್ರೂ ಆ ಹುಡುಗನ ಮೊಬೈಲ್ ನಾಟ್ ರೀಚೆಬಲ್. ಆತನನ್ನ ಸಂಪರ್ಕಿಸಿ ಅಸಲಿಯತ್ತು ಹೊರಗೆಳೆಯೋ ಪ್ರಯತ್ನ ನಮ್ಮ ವಾಹಿನಿ ಕಡೆಯಿಂದ ನಿರಂತರವಾಗಿದ್ದೇ ಇದ್ದೇ ಇರುತ್ತೆ.
ಒಟ್ಟಾರೆ ಎಲ್ಲರಂತೆ ನಾನು ಒಬ್ಬ ಮನುಷ್ಯ, ಮನುಷ್ಯ ಧರ್ಮವೇ ಶ್ರೇಷ್ಟ ಯಾರ್ ಏನೇ ಅನ್ನಲಿ ನಾನು ಮನುಷ್ಯನಾಗಿ ಬದುಕುವೆ ಎಂದು ಹೇಳೋ ಗಗನ್ ಗೆ ಈ ಆರೋಪ ವಾದ ವಿವಾದ ಪರ ವಿರೋಧದ ಚರ್ಚೆಗಳು ಇರಿಸು ಮುರಿಸು ತರಿಸುತ್ತಿರುವುದಂತೂ ಸುಳ್ಳಲ್ಲ..ಅಲ್ವಾ..?