ಕ್ರೈಂ ಸ್ಟೋರಿ
ಸಂಘ ಪರಿವಾರದ ವಿರುದ್ಧ ವಿವಾದಿತ ಪ್ಲೇಕಾರ್ಡ್; SDPI ಲೀಡರ್ ಅರೆಸ್ಟ್

ಹುಬ್ಬಳ್ಳಿ: ರಂಜಾನ್ ಪ್ರಾರ್ಥನೆ ವೇಳೆ ಸಂಘ ಪಾರಿವಾರದ ವಿರುದ್ಧ ಅವಹೇಳನಕಾರಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ SDPI ಮುಖಂಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
SDPI ಮುಖಂಡ ಅಬ್ದುಲ್ ಗಪ್ಪುರ್ ಕುರಹಟ್ಟಿ ಬಂಧಿತ ಆರೋಪಿ. ಪ್ರಾರ್ಥನೆ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಸಂಘ ಪರಿವಾರಗಳ ವಿರುದ್ಧ ಪ್ಲೇ ಕಾರ್ಡ್ ತೋರಿಸಿದ್ದರು. ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ರು.

ದೂರಿನ ಆಧಾರದ ಬಳಿಕ ಗಪ್ಪುರ್ ಕುರಹಟ್ಟಿ ವಿರುದ್ಧ ಪೋಲಿಸರು FIR ದಾಖಲಿಸಿದ್ದಾರೆ. ಬಳಿಕ ಅಬ್ದುಲ್ ಗಪ್ಪುರ್ನನ್ನು ಅರೆಸ್ಟ್ ಮಾಡಿ ತನಿಖೆ ನಡೆಸ್ತಿದ್ದಾರೆ.
ಪೊಲೀಸರು ಅಬ್ದುಲ್ ಗಪ್ಪುರ್ ಮೊಬೈಲ್ ಫೋನ್ ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.




