ರಾಮ ಮಂದಿರ : ಹೌದು..ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರಕ್ಕೆ ಕಾಂಗ್ರೆಸ್ ಪಕ್ಷದ ಯಾರೊಬ್ಬರು ಹೋಗೋದು ಬೇಡ ಎಂಬ ನಿರ್ಧಾರ ಎಐಸಿಸಿಯಿಂದ ಪ್ರಕಟಗೊಂಡಿದೆ. ರಾಮಮಂದಿರ ನಿರ್ಮಾಣಕ್ಕೆ ಕೈ ಇಟ್ಟಾಗಿನಿಂದಲೂ ಇದು ಬಿಜೆಪಿಯ ರಾಮರಾಜಕೀಯ ಅಂತಲೇ ವ್ಯಂಗ್ಯವಾಡಿಕೊಂಡು ಬಂದಿದ್ದ ಕಾಂಗ್ರೆಸ್ ಹೈಕಮಾಂಡ್ ಕೊನೆಗೆ ರಾಮಮಂದಿರ ಉದ್ಘಾಟನೆಗೆ ಹೋಗೋದು ಬೇಡ ಎಂಬ ತೀರ್ಮಾನಕ್ಕೆ ಬಂದಿದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸೋನಿಯಾಗಾಂಧಿಯವರು ಹೋಗುವ ಸಾಧ್ಯತೆ ಇದೆ ಅಂತೇಳಿದ್ರು.
ಆದ್ರೆ ಇದೀಗ ಹೊರ ಬಿದ್ದಿರುವ ಎಐಸಿಸಿ ಆದೇಶ ಯಾರೊಬ್ಬರು ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಹೋಗೋದು ಬೇಡ ಎಂದು ನಿರ್ಧರಿಸಿದ್ರು. ರಾಮಮಂದಿರ ನಿರ್ಮಾಣದ ಹಿಂದೆ ಕೇವಲ ಬಿಜೆಪಿ ಪಾತ್ರವಿಲ್ಲ..ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆಯೂ ಇದೆ ಅಂತ ಟ್ವೀಟಾಸ್ತ್ರಗಳು ಹರಿದಿದ್ವು..
ಇದೀಗ ರಾಮಮಂದಿರ ಕೇವಲ ಬಿಜೆಪಿಯ ರಾಜಕೀಯದ ಗಿಮಿಕ್ ಎಂಬ ಹೇಳಿಕೆ ನೀಡಿ, ಸಾಕಷ್ಟು ಚರ್ಚೆಗಳ ಬಳಿಕ ಹೋಗೋದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.. ಇದಕ್ಕೆ ಬಿಜೆಪಿ ಕಾಂಗ್ರೆಸ್ ನವರು ಹಿಂದೂ ವಿರೋಧಿಗಳು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ದೇಶದ ಜನ ತಕ್ಕ ಪಾಠ ಕಲಿಸ್ತಾರೆ ಅಂತ ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದಾರೆ.