Freedom TV

ಮನ್ಸೂರ್ ಅಲಿ ಖಾನ್ ಪರ ಕಾಂಗ್ರೆಸ್ ದಿಗ್ಗಜರ ಅಬ್ಬರದ ಪ್ರಚಾರ

ಬೆಂಗಳೂರು:  ಲೋಕಸಭಾ ಚುನಾವಣೆ ಎದುರಿಸಲು ಈಗಾಗಲೆ ಎಲ್ಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾ ಇದ್ದರೆ. ಮತ ಭೇಟೆಯಂತೂ ಜೋರಾಗಿ ಆಗುತ್ತಿದೆ.

ಇನ್ನು ಬೆಂಗಳೂರು ಸೆಂಟ್ರಲ್ ನ ಲೋಕಸಭಾ ಚುನಾವಣಾ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಕಾಂಗ್ರೆಸ್ ನ ದಿಗ್ಗಜರೆಲ್ಲರು ಅಬ್ಬರದ ಪ್ರಚಾರ ವನ್ನ ನಡೆಸ್ತಾ ಇದ್ದು, ಈ ಬಾರಿ ಮನ್ಸೂರ್ ಅಲಿ ಖಾನ್ ಗೆಲ್ಲುವ ನಿರೀಕ್ಷೆ ಬಹುತೇಕ ಹೆಚ್ಚಾಗಿದೆ.

ನಿನ್ನೆ  ಶಿವಾಜಿ ನಗರದ ಚಾಂದಿನಿ ಚೌಕ್ ನಲ್ಲಿ ನಡೆದ  ಕಾಂಗ್ರೆಸ್ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು , ಎಲ್ಲೆಡೆ ಹಬ್ಬದ ವಾತವರಣದಂತೆ   ವೇದಿಕೆ ಝಗಮಗಿಸುತಿತ್ತು.. ಪಟಾಕಿಗಳ ಅಬ್ಬರ, ಕಾಂಗ್ರೆಸ್ ಬಾವುಟದ ಹಾರಾಟ, ನೆರೆದಿದ್ದ ಜನತೆ, ಒಟ್ಟಾರೆ ಎಲ್ಲವೂ ಮನ್ಸೂರ್ ಅಲಿ ಖಾನ್ ಗೆಲುವನ್ನು ಬಹುತೇಕ ಸೂಚಿಸುತ್ತಿತ್ತು .

ಇನ್ನು ಈ ಸಭೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಗೆ ಸಾಥ್ ನೀಡಲು  ಕರ್ನಾಟಕ  ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸುರ್ಜೆವಾಲ, ಶಾಂತಿನಗರ  ಎಂಎಲ್ಎ ಹ್ಯಾರಿಸ್, ಶಿವಾಜಿನಗರ ಎಂಎಲ್ಎ ರಿಜ್ವಾನ್ ಹರ್ಷದ್, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ನಲಪಾಡ್, ನಾಗರಾಜ್ ಯಾದವ್ , ಮತ್ತಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Comments (0)

Your email address will not be published. Required fields are marked *

Back to top button