Wednesday, January 28, 2026
17 C
Bengaluru
Google search engine
LIVE
ಮನೆUncategorizedದೆಹಲಿಯಲ್ಲಿ ಅನುದಾನ ಸಮರ : ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದಿಂದ ಪ್ರತಿಭಟನೆ

ದೆಹಲಿಯಲ್ಲಿ ಅನುದಾನ ಸಮರ : ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದಿಂದ ಪ್ರತಿಭಟನೆ

ದೆಹಲಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎಲ್ಲೆಡೆ ರಂಗೇರಿದೆ.ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಸರ್ಕಾರದ ನಡುವಣ ಸಂಘರ್ಷ ಅಂತಿಮ ಘಟ್ಟ ತಲುಪಿದೆ.ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಂಎಲ್‌ಸಿಗಳು, ಸಂಸದರು ಪ್ರತಿಭಟನೆ ನಡೆಸಲಿದ್ದಾರೆ.

ಇನ್ನು..ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲಾ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿ ಕಡೆ ಮುಖ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ಸಂಜೆ ಭೋಪಾಲ್‌ಗೆ ತೆರಳಿದ್ದು, ರಾತ್ರಿಯೇ ದೆಹಲಿ ತಲುಪಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿರುವ ಬಿಜೆಪಿಗರನ್ನು ಕಾಂಗ್ರೆಸ್ಸಿಗರು ಕೆಣಕಲು ನೋಡಿದ್ದಾರೆ.

ಕೇಂದ್ರದ ವಿರುದ್ಧ ಕರ್ನಾಟಕ ಕಾಂಗ್ರೆಸ್​ನಿಂದ ಆರೋಪ ಪಟ್ಟಿಯಲ್ಲಿ ಏನಿದೆ?

15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ₹5,495 ಕೋಟಿ ಶಿಫಾರಸು ಮಾಡಿದ್ರೂ ನಿರ್ಲಕ್ಷ್ಯ
ಕರ್ನಾಟಕಕ್ಕೆ ಇದ್ದ 4.72 ರಷ್ಟು ಇರುವ ತೆರಿಗೆ ಪಾಲನ್ನು 3.64ಕ್ಕೆ ಇಳಿಸಿರುವುದು
5 ವರ್ಷಗಳಲ್ಲಿ ಬರೋಬ್ಬರಿ ₹62 ಸಾವಿರ ಕೋಟಿ ತಾರತಮ್ಯವಾಗಿದೆ
ಕೇಂದ್ರ ಹಾಗೂ ರಾಜ್ಯಗಳ ಸಹಭಾಗಿತ್ವದ ಯೋಜನೆಗಳಿಗೆ ಅನುದಾನ ಕಡಿತ
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,300 ಕೋಟಿ ಬಿಡುಗಡೆ ಮಾಡಿಲ್ಲ
ಬರ ಪರಿಹಾರಕ್ಕೆ ₹18 ಸಾವಿರ ಕೋಟಿ ಕೇಳಿದರೇ ಕೇಂದ್ರ ನಯಾಪೈಸೆನೂ ನೀಡಿಲ್ಲ
ಮಹದಾಯಿ ಯೋಜನೆ ಸಂಬಂಧ ರಾಜ್ಯದ ಪರ ಕೇಂದ್ರ ನಿಂತಿಲ್ಲ
2017-18ರಿಂದ ಇಲ್ಲಿಯವರೆಗೆ ಒಟ್ಟು ₹1.87 ಲಕ್ಷ ಕೋಟಿ ನಷ್ಟವೆಂದು ಆರೋಪ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments