ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ..
ಗಣೇಶ್ ಬಳಿಕ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ 6 ಜನ ಆರೋಪಿಗಳನ್ನು ಸುಖರಾಯಪಟ್ಟಣದ ಪೊಲೀಸರು ಬಂಧಿಸಿದ್ದು, ಗಣೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳಲ್ಲಿ A2 ನಿತಿನ್, A4 ದರ್ಶನ್, A5 ಅಜಯ್ ಸೇರಿದಂತೆ ದರ್ಶನ್ ನಾಯ್ಕ್, ಯೋಗೇಶ್ ಮತ್ತು ಫೈಸಲ್ ಇದ್ದಾರೆ.
ಇವರನ್ನು ನಿನ್ನೆ ತಮಿಳುನಾಡಿನ ಮಧುರೈಯಲ್ಲಿ ವಿಶೇಷ ತಂಡ ಬಂಧಿಸಿ ಕರ್ನಾಟಕಕ್ಕೆ ಕರೆತಂದಿದೆ. ಆರೋಪಿಗಳ ಬಂಧನಕ್ಕಾಗಿ ಸಖರಾಯಪಟ್ಟಣ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ನಡೆಸಿದ್ದರು. ಈ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ A1 ಸಂಜಯ್, A3 ನಾಗಭೂಷಣ್, A6 ಮಿಥುನ್ ಸೇರಿದಂತೆ ಆರು ಆರೋಪಿಗಳು ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ನಿನ್ನೆ ಬಂಧನಕ್ಕೊಳಗಾದ ಆರು ಆರೋಪಿಗಳನ್ನು ಕಡೂರು JMFC ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ತನಿಖೆಯು ತೀವ್ರಗತಿಯಲ್ಲಿ ಸಾಗುತ್ತಿದ್ದು, ಹತ್ಯೆಯ ಹಿಂದಿನ ಕಾರಣಗಳು ಮತ್ತು ಷಡ್ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಿಸೆಂಬರ್ 5ರ ರಾತ್ರಿ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಣೇಶ್ ಅವರನ್ನು ಆರೋಪಿಗಳು ದಾರಿಯಲ್ಲಿ ತಡೆದು ಹತ್ಯೆ ಮಾಡಿದ್ದರು. ಈ ಹತ್ಯೆ ರಾಜಕೀಯ ದ್ವೇಷ ಅಥವಾ ವೈಯಕ್ತಿಕ ಹಗೆತನದಿಂದ ನಡೆದಿದೆಯೇ ಎಂಬುದು ತನಿಖೆಯಲ್ಲಿ ಬಯಲಾಗುತ್ತಿದೆ.


