ತುಮಕೂರು: ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಅಶಾಂತಿ ವಾತಾವರಣ ಮಾತ್ರವಲ್ಲ, ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಮಧುಗಿರಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಹಲ್ಲೆ ಪ್ರಕರಣ ಕುರಿತು ಮಾತನಾಡಿದ ಅವರು. ಇದೇ ರೀತಿ ಮುಂದುವರೇದರೆ ರಾಜ್ಯದಲ್ಲಿ ಅಶಾಂತಿ ವಾತಾವರಣ ಮಾತ್ರವಲ್ಲ, ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ವಿರಾಜಪೇಟೆಯ ಕೊಡಗಿನಲ್ಲು ಮೂರು ಜನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಈ ರೀತಿಯ ವಾತಾವರಣ ಸೃಷ್ಟಿ ಮಾಡಿ ಕಾಂಗ್ರೆಸ್ ನವರು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡುತಿದ್ದಾರೆ. ಅದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ, ಈ ಸರ್ಕಾರ ಬಂದಾಗಿಂದ ರಾಮನ ಹೆಸರು ಹೇಳುವವರನ್ನು, ಮತ್ತು ಕಾಂಗ್ರೆಸ್ ವಿರುದ್ದ ಇದ್ದವರ ಮೇಲೆ ಹಲ್ಲೆ ನಡೆಸೋದು, ತೆಂಗಿನ ತೋಟಕ್ಕೆ ಬೆಂಕಿ ಇಡೋ ಹಳೆಯ ಚಾಳಿ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬಿಜೆಪಿ ವಿರುದ್ಧ ಚೆಂಬಿನ ಜಾಹಿರಾತು ಪ್ರಕಟ ವಿಚಾರವಾಗಿ ಮಾತು ಮುಂದುವರೆಸಿದ ಅವರು, ಇದು ಕಾಂಗ್ರೆಸ್ ನವರ ನಡವಳಿಕೆ ಹಾಗೂ ಕೀಳು ಅಭಿರುಚಿ ತೋರಿಸುತ್ತದೆ. ಅಲ್ಲಿ ಚೆಂಬನ್ನು ತೋರಿಸುವ ಬದಲು ರಾಜ್ಯದ ಜನರಿಂದ ತೆರಿಗೆ ರೂಪದಲ್ಲಿ ಹಣ ಲೂಟಿ ಹೊಡೆಯುವ ಚಿತ್ರ ತೋರಿಸಬೇಕು, ಕನ್ನಡಿಗರು ಕಟ್ಟಿದ ತೆರಿಗೆ ಹಣ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಲೂಟಿ ಹಣ ತುಂಬಿಕೊಂಡು ತಲೆ ಮೇಲೆ ಹೊತ್ತುಕೊಂಡು ಹೋಗುವ ಚಿತ್ರ ಹಾಕಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.