ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಗೌರ್ನರ್ ಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ವಿರುದ್ಧ ರಾಜಭವನಕ್ಕೆ ಸ್ಪೋಟಕ ದೂರು ಸಲ್ಲಿಕೆಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿಯನ್ನು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ವರೆಗೂ ಎಳೆದು ಹಣ್ಣುಗಾಯಿ ನೀರುಗಾಯಿ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಆಲಂ ಪಾಶ ಇದೀಗ ಟಿ ಜೆ ಅಬ್ರಾಹಾಂ ವಿರುದ್ಧವೇ ದೂರು ನೀಡಿದ್ದಾರೆ. ಗೌರ್ನರ್ ಗೆ ನೀಡಿರುವ 15ಪುಟಗಳ ದೂರಿನಲ್ಲಿ ಪಾಶ ಅವರು ಅಬ್ರಹಾಂ ಮನವಿ ತಿರಸ್ಕರಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಅಬ್ರಹಾಂ ವಿರುದ್ಧ ಇರುವ ಪ್ರಕರಣಗಳು, fir ಗಳು, ಸುಪ್ರೀಂ ಕೋರ್ಟ್ ದಂಡ ವಿಧಿಸಿರುವುದನ್ನು ಉಲ್ಲೇಖಿಸಿ, ಆತನ ವ್ಯಕ್ತಿತ್ವ ಸರಿಯಿಲ್ಲ.. ಆತ ಅಪ್ರಮಾಣಿಕನಾಗಿದ್ದು ವಿಶಾಸಾರ್ಹ ವ್ಯಕ್ತಿಯಲ್ಲ.. ಹಾಗಾಗಿ ಮನವಿಗೆ ಮಣೆ ಹಾಕಬೇಡಿ ಎಂದು ಒತ್ತಾಯಿಸಿದ್ದಾರೆ. ಅಬ್ರಹಾಂ ದೂರು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ.. ಇವರ ಹವ್ಯಾಸವೇ ದೂರು ನೀಡುವುದಾಗಿದ್ದು, ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಕುಮಾರಸ್ವಾಮಿ, ಎಸ್ ಎಮ್ ಕೃಷ್ಣ.. ಹೀಗೆ ಹಲವರ ಮೇಲೆ ನಿರಂತರ ದೂರು ನೀಡಿದ್ದಾರೆ, ಯಾವ ಪ್ರಕರಣಗಳು ಸಹ ಸಾಬೀತಾಗಿಲ್ಲ..ತಾರ್ಕಿಕ ಅಂತ್ಯ ಕಂಡಿಲ್ಲ. ಸುಪ್ರೀಂಕೋರ್ಟ್ ಇವರಿಗೆ 25ಲಕ್ಷ ದಂಡ ಹಾಕಿದೆ.. ಇವರು ಭೂವ್ಯಾಜ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆಲಂ ಪಾಶ ದೂರಿನಲ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯದಂತೆ ಕಂಡುಬರುತ್ತಿದ್ದು, ಇದನ್ನು ಪರಿಗಣಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಬರುವುದಿಲ್ಲ.. ಅಷ್ಟೇ ಅಲ್ಲದೆ ಇದರ ತನಿಖೆ ಪೂರ್ಣಗೊಳ್ಳುವ ಮೊದಲೇ ಅಬ್ರಹಾಂ ನೀಡಿರುವ ಉತ್ಪ್ರೇಕ್ಷಿತ ದೂರನ್ನು ಪರಿಗಣಿಸಬಾರದು ಎಂದು ಆಲಂ ಪಾಶ ಒತ್ತಾಯಿಸಿದ್ದಾರೆ.
ಆಲಂ ಪಾಶ ಅವರು ರಾಜ್ಯಪಾಲರಿಗೆ ನೀಡಿರುವ ದೂರು ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ವಿರುದ್ಧ ಅಬ್ರಹಾಂ ಮಾತ್ರವಲ್ಲದೆ ಎನ್ ಆರ್ ರಮೇಶ, ಸ್ನೇಹಮಯಿ ಕೃಷ್ಣ ಸೇರಿದಂತೆ ಹಲವರು ದೂರುಗಳನ್ನು ನೀಡಿದ್ದಾರೆ. ಇತ್ತ ಆಲಂ ಪಾಶ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿರುವುದು ಕುತೂಹಲ ಮೂಡಿಸಿದೆ.