Top Newsಫ್ರೀಡಂ ಟಿವಿ ವಿಶೇಷಮನರಂಜನೆಸಿನಿಮಾ

ಕಲಾ ಸರಸ್ವತಿ ಲೀಲಮ್ಮ 11 ನೇ ದಿನದ ಪುಣ್ಯ ಸ್ಮರಣೆ

ಕರುನಾಡ ಕಲಾ ಸರಸ್ವತಿ ನಟಿ ಲೀಲಾವತಿಯರನ್ನು ಕಳೆದುಕೊಂಡು ಇಂದಿಗೆ 11ನೇ ದಿನ. ಈ ಸಂಬಂಧ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ವೈಕುಂಠ ಸಮಾರಾಧನೆ ನಡೆಯುತ್ತಿದೆ.


ಇಂದಿನ ಕಾರ್ಯವನ್ನು ಮಗ ವಿನೋದ್ ರಾಜ್ ಜೊತೆ ಕುಟುಂಬದವರು ಗಣ್ಯರು ಭಾಗಿಯಾಗಿ ಕಾರ್ಯ ನೆರವೆಲಿಸಿದ್ದಾರೆ. 11 ನೇ ದಿನದ ಸ್ಮರಣೆಗೆ ಕುಟುಂಬವರು ಹಾಗೂ ಗಣ್ಯರು ಭಾಗವಹಿಸಿ ಲೀಲಮ್ಮನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನಿಟ್ಟು ಪೂಜೆ ಸಲಿಸಿದ್ದಾರೆ.

ಇನ್ನು ಕಲಾಸರಸ್ವತಿಯೆಂದೇ ಬಿರುದು ಪಡೆದಿರುವ ನಟಿ ಲೀಲಾವತಿ 500 ಕ್ಕೂ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಚಿತ್ರರಂಗ ಮಾತ್ರವಲ್ಲದೇ ತಮ್ಮ ನಿಜ ಜೀವನದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

Comments (0)

Your email address will not be published. Required fields are marked *

Back to top button