ಬೇರೊಂದು ವಿದ್ಯಾರ್ಥಿ ಗುಂಪಿನ ದೂರಿನ ಮೇರೆಗೆ ಕಾಲೇಜು ಅಧಿಕಾರಿಗಳು ಆರೋಪಗಳ ಕುರಿತು ವಿಚಾರಣೆ ನಡೆಸಿದರು. ವಿದ್ಯಾರ್ಥಿ ಕಾಲೇಜು ಆವರಣದಲ್ಲಿ ಕೆಲವು ನಿರ್ಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ, ಇದು ಅವರನ್ನು ಹೊರಹಾಕಲು ಕಾರಣವಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಒಡಿಶಾದ (Odisha) ಬರ್ಹಾಂಪುರದ ಪರಲಾ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೀಫ್ ಅಡುಗೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ಕಾಲೇಜಿನಲ್ಲಿ ಉದ್ವಿಗ್ನ ವಾತಾವಾರಣವುಂಟಾಗಿದ್ದು ಕಾಲೇಜು ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. “ಹಾಲ್ ಆಫ್ ರೆಸಿಡೆನ್ಸ್‌ನ ನಿಯಮಗಳು ಮತ್ತು ನೀತಿ ಸಂಹಿತೆ”ಗೆ ವಿರುದ್ಧವಾದ ‘ನಿರ್ಬಂಧಿತ ಚಟುವಟಿಕೆಗಳಲ್ಲಿ’ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರಿಂದ ಅವರನ್ನು ಹೊರಹಾಕಲಾಗಿದೆ ಎಂದು ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಗುರುವಾರ ಅಧಿಸೂಚನೆಯಲ್ಲಿ ಹೇಳಿರುವುದಾಗಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆದಾಗ್ಯೂ, ಈ ನಿರ್ಬಂಧಿತ ಚಟುವಟಿಕೆಗಳು ಏನನ್ನು ಒಳಗೊಂಡಿವೆ ಎಂಬುದರ ಕುರಿತು ಯಾವುದೇ ಅಧಿಕೃತ ಕಾಮೆಂಟ್ ಇಲ್ಲ. ಮೂಲಗಳನ್ನು ಉಲ್ಲೇಖಿಸಿ, ಹೊರಹಾಕಲ್ಪಟ್ಟ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ₹ 2,000 ದಂಡವನ್ನು ವಿಧಿಸಲಾಗಿದೆ ಎಂದು ಇಂಡಿಯನ್ ಇಂಡಿಯನ್ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ ರಾತ್ರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ‘ಬೀಫ್’ ಬೇಯಿಸಿದ್ದರು ಎನ್ನಲಾಗಿದೆ. ತರುವಾಯ, ಹಾಸ್ಟೆಲ್ ನಲ್ಲಿದ್ದ ಮತ್ತೊಂದು ಗುಂಪು ಘಟನೆಯನ್ನು ಡೀನ್‌ಗೆ ವರದಿ ಮಾಡಿದೆ.
“ವೈವಿಧ್ಯಮಯ ಸಮುದಾಯವಾಗಿ, ಎಲ್ಲಾ ವಿದ್ಯಾರ್ಥಿಗಳ ಮೌಲ್ಯಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಘಟನೆಯು (ಬೀಫ್ ಅಡುಗೆಯ ಆರೋಪ) ಅಶಾಂತಿ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಿದೆ, ಇದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಹಾಸ್ಟೆಲ್ ವಾಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಯಮಾಡಿ ವಿನಂತಿಸುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.