Wednesday, January 28, 2026
17 C
Bengaluru
Google search engine
LIVE
ಮನೆ#Exclusive NewsTop Newsಸೆಂಟ್ರಿಂಗ್​ ಕುಸಿತದು ಇಬ್ಬರು ಕಾರ್ಮಿಕರು ಸಾವು

ಸೆಂಟ್ರಿಂಗ್​ ಕುಸಿತದು ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು : ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್​ ಕುಸಿದು ಮೂವರು ಕಾರ್ಮಿಕರ ಪೈಕಿ ಇಬ್ಬರು ಸಾವನ್ನಪ್ಪಿರುವಂತಹಘಟನೆ ಬೆಂಗಳೂರಿನ ಪೀಣ್ಯದ ಎನ್​ಟಿಟಿಎಫ್ ರಸ್ತೆಯಲ್ಲಿ ನಡೆದಿದೆ. ದುರಂತದಲ್ಲಿ ಕಾರ್ಮಿಕ ಹಿಮಾಂಶು (28), ಆಸ್ಪತ್ರೆಗೆ ಸಾಗಿಸುವಾಗ ಪ್ರಕಾಶ್ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸೆಂಟ್ರಿಂಗ್ ಹಾಕಿ ಆರ್​.ಸಿ.ಸಿ ಹಾಕುವ ಕೆಲಸ ನಡೆಯುತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಐದನೇ ಅಂತಸ್ತಿನಲ್ಲಿ ಕಟ್ಟಡ‌ ಕಾಮಗಾರಿ ಕೆಲಸ ನಡೆಯುತಿತ್ತು. ಈ ಸಂದರ್ಭದಲ್ಲಿ ನಿರ್ಮಾಣ ಮಾಡುತ್ತಿದ್ದ ಸೆಂಟ್ರಿಂಗ್ ಕುಸಿದಿದೆ. ಐದನೇ ಮಹಡಿಯಿಂದ ಕಾರ್ಮಿಕ ಹಿಮಾಂಶು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕ ಯಾದಗಿರಿ ಮೂಲದವನು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments