ಸಿನಿಮಾ

ವೀರ ಚಂದ್ರಹಾಸ ಸಿನಿಮಾ ಟ್ರೇಲರ್​​​​ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ “ವೀರ ಚಂದ್ರಹಾಸ” ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು.

ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು‌ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ “ವೀರ ಚಂದ್ರಹಾಸ” ಸಿನಿಮಾದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿರುವ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

Comments (0)

Your email address will not be published. Required fields are marked *

Back to top button