ಜಿಲ್ಲೆ
ಹಾವೇರಿ ಎಸ್ಪಿ ಅಂಶುಕುಮಾರ್ ಸೇರಿ ಮೂವರಿಗೆ ಸಿಎಂ ಮೆಡಲ್

ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಪೋಲಿಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುತ್ತೆ.
ಇನ್ನು ಮುಖ್ಯಮಂತ್ರಿ ಪದಕಕ್ಕೆ ಹಾವೇರಿ ಜಿಲ್ಲಾ ಎಸ್ಪಿ ಅಂಶುಕುಮಾರ್, ಶಿಗ್ಗಾಂವಿ ಪೋಲಿಸ್ ಠಾಣೆಯ ಸಿಬ್ಬಂದಿ, ಎಚ್ ತಿಪ್ಪೆಸ್ವಾಮಿ ಹಾಗೂ ಸವಣೂರು ಪೋಲಿಸ್ ಠಾಣೆಯ ಬಸವರಾಜ ಡಿ ಮಲ್ಲೂರ್ ಅವರಿಗೂ ಸಿಎಂ ಪದಕ ಲಭಿಸಿದೆ.
ಅಲ್ಲದೇ ರಾಜ್ಯದ ಮೂವರು ಪೋಲಿಸ್ ಅಧಿಕಾರಿಗಳು ಸೇರಿಂದೆ ಒಟ್ಟು 197 ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.




