ಕಲಬುರಗಿ: ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ದುರಂತವಲ್ಲದೇ ಮತ್ತೇನು ಅಲ್ಲ..ಹಿಂದೆ ಪ್ರತ್ಯೇಕ ಧರ್ಮ ಅಂತ ಬೆಂಕಿ ಹಚ್ಚಿದ್ರು. ಈಗ ರಾಜ್ಯದಲ್ಲಿ ಜಾತಿ ಸಮೀಕ್ಷೆ ಹೆಸರಿನಲ್ಲಿ ವೀರಶೈವ ಮತ್ತು ಲಿಂಗಾಯತ ಸಮಾಜಗಳಿಗೆ ಬೆಂಕಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡಿನ ಜನತೆ ಕಂಡು ಅರಿತಿದ್ದಾರೆ ಹೊಸದಾಗಿ ಕೇಳುವಂತಹದ್ದು ಏನು ಇಲ್ಲ. ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚಿ ಒಡೆದಾಡುವ ನೀತಿಯನ್ನು ಅವರು ಯಾವತ್ತಿನಿಂದಲೂ ಮಾಡಿಕೊಂಡೆ ಬರುತ್ತಿದ್ದಾರೆ. ಕಾಂತರಾಜು ವರದಿ ಸೇರಿದಂತೆ ಇತರ ವರದಿಗಳ ಕುರಿತು ಸಂಪೂರ್ಣವಾಗಿ ಮಾಹಿತಿ ಇದ್ದಾಗಲೂ ಕೂಡ ಪುನರ್ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಂಡರಿಯದಂತೆ ಮಳೆ ಬೀಳುತ್ತಿದೆ. ಇದರಿಂದಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ ಕಲ್ಯಾಣ ಕರ್ನಾಟಕದಲ್ಲಿ ಹೆಸರು ಉದ್ದು ಮತ್ತು ತೊಗರಿ ಸಂಪೂರ್ಣವಾಗಿ ನೀರಿನಲ್ಲಿ ನಿಂತು ಕೊಳೆತು ಹೋಗಿದೆ. ಇದರಿಂದಾಗಿ ಪರಿಹಾರದ ಬೇಡಿಕೆ ಭುಗಿಲೆದಿದೆ. ಆದರೂ ಕೂಡ ರಾಜ್ಯ ಸರ್ಕಾರ ಇದನ್ನೆಲ್ಲವನ್ನು ಬದಿಗೊತ್ತಿ ಕೇವಲ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಜಾತಿಯನ್ನು ಒಡೆದಾಡುವ ನೀತಿ ಅನುಸರಿಸಲಾಗುತ್ತಿದೆ. ಎಂದು ಆರೋಪ ಮಾಡಿದರು.


