Wednesday, January 28, 2026
16.4 C
Bengaluru
Google search engine
LIVE
ಮನೆUncategorizedಸಿಎಂ ಡಿನ್ನರ್ ಮೀಟಿಂಗ್ ರಹಸ್ಯ ಏನು? ಡಿನ್ನರ್ ಮೀಟಿಂಗ್​ನಲ್ಲಿ ಸಿಎಂ ಕೊಟ್ಟ ಸೂಚನೆಗಳೇನು?

ಸಿಎಂ ಡಿನ್ನರ್ ಮೀಟಿಂಗ್ ರಹಸ್ಯ ಏನು? ಡಿನ್ನರ್ ಮೀಟಿಂಗ್​ನಲ್ಲಿ ಸಿಎಂ ಕೊಟ್ಟ ಸೂಚನೆಗಳೇನು?

ಬೆಂಗಳೂರು: ಲೋಕಾ ಕದನಕ್ಕೆ ಕೆಲವೇ ತಿಂಗಳುಗಳು ಬಾಕಿ ಇದೆ. ರಾಜ್ಯದಲ್ಲಿ 3ಪಕ್ಷಗಳು ಭರ್ಜರಿ ಸಮರಾಭ್ಯಾಸ ಮಾಡ್ತಿವೇ..ಅದರಲ್ಲೂ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡಿರೋದು ಕಾಂಗ್ರೆಸ್​ಗೆ ಅಂಗಳದಲ್ಲಿ ಟೆನ್ಷನ್​ ಹೆಚ್ಚಿಸಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್​ ತಂತ್ರ-ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ನಿವಾಸ ಕಾವೇರಿಯಲ್ಲಿ ಸಂಪುಟ ಸಚಿವರ ಜೊತೆ ರಾತ್ರಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.

ತಡರಾತ್ರಿವರೆಗೂ ನಡೆದ ಡಿನ್ನರ್​ ಮೀಟಿಂಗ್​ನಲ್ಲಿ ಸಚಿವ ರಾಮಲಿಂಗಾರೆಡ್ಡಿ, ಲಕ್ಷ್ಮಿಹೆಬ್ಬಾಳ್ಕರ್, ಜಮೀರ್​ ಅಹ್ಮದ್​, ಕೆ.ಹೆಚ್​ ಮುನಿಯಪ್ಪ ಸೇರಿದಂತೆ ಬಹುತೇಕ ಸಚಿವರು ಹಾಜರಾಗಿದ್ರು. ರಾಮ ಮಂದಿರ ಉದ್ಘಾಟನೆ ಬಳಿಕ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಆಕ್ಟೀವ್ ಆಗಿದೆ. ಬಿಜೆಪಿ ಆಕ್ಟೀವ್ ಕಾರಣಕ್ಕೆ ಸಚಿವರ ಜೊತೆ ಸಿಎಂ ಡಿನ್ನರ್‌ ಮೀಟಿಂಗ್​ ಮಾಡಿ, ಬಿಜೆಪಿ-ಜೆಡಿಎಸ್​ ಕಟ್ಟಿಹಾಕುವ ಬಗ್ಗೆ ಚರ್ಚೆ ಮಾಡಿದ್ದಾರೆ. ಹಾಗೂ ಕೆಲವೊಂದು ಸೂಚನೆಗಳನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

ಸಿಎಂ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್​ನಲ್ಲಿ ಲೋಕಸಭಾ ಚುನಾವಣೆ ವಿಚಾರವಾಗಿ ಮಹತ್ವದ ಚರ್ಚೆ ನಡೆದಿದೆ. ಎಲ್ಲರೂ ಜವಾಬ್ದಾರಿ ತೆಗೆದುಕೊಳ್ತೀವಿ ಅಂತ ಸಿಎಂ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಲೋಕಸಭೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಹೈಕಮಾಂಡ್​ ತೀರ್ಮಾನ ಮಾಡುತ್ತೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಧಾನ ಗೆಲ್ಲುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗ್ತಿದಂತೆ ರಾಜಕೀಯ ಪಕ್ಷಗಳು ತಂತ್ರ, ಪ್ರತಿತಂತ್ರ-ರತಂತ್ರಗಳನ್ನು ಎಣೆಯುತ್ತಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments