ಜೈಪುರ: ಮೇವಾರ್ ರಾಜಮನೆತನದ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್‌ಗೆ ಅರಮನೆಯ ಒಳಗಡೆ ಪ್ರವೇಶ ಮಾಡಲು ನಿರಾಕರಿಸಿದ್ದ ಹಾಗಾಗಿ ಅರಮನೆಯ ಬಿಜೆಪಿ ಬೆಂಬಲಿಗರಿಂದ ಹೊರಗಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮೇವಾರದ 77ನೇ ಮಹಾರಾಣಾ ಆಗಿ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್ ಪಟ್ಟಾಭಿಷೇಕದ ನಂತರ ಉದಯಪುರ ಅರಮನೆಯಲ್ಲಿ ಗದ್ದಲ ಸೃಷ್ಟಿಯಾಗಿದೆ. ಸಿಂಗ್ ಮತ್ತು ಬೆಂಬಲಿಗರಿಗೆ ಅರಮನೆಗೆ ಒಳಗಡೆ ಪ್ರವೇಶಕ್ಕೆ ನಿರಾಕರಿಸಲಾಯಿತು.
ಇದರಿಂದ ಕುಪಿತಗೊಂಡ ಬಿಜೆಪಿ ಬೆಂಬಲಿಗರು ರಾತ್ರಿ 10 ಗಂಟೆಯ ವೇಳೆ ಕಲ್ಲು ತೂರಾಟ ನಡೆಸಿ ಅರಮನೆ ಗೇಟ್‌ಗೆ ನುಗ್ಗಲು ಯತ್ನಿಸಿದರು. ಗಲಭೆ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಪೊಲೀಸರು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ವಿಶ್ವರಾಜ್ ಸಿಂಗ್ ಕೂಡ ನಿನ್ನೆ ರಾತ್ರಿ ಐದು ಗಂಟೆಗಳ ಕಾಲ ಸ್ಥಳದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದರು. ಇದೀಗ ಜಿಲ್ಲಾಡಳಿತ ಮಧ್ಯ ಪ್ರವೇಶಿಸಲು ನಿರ್ಧರಿಸಿದೆ.
ತಂದೆ ಮಹೇಂದ್ರ ಸಿಂಗ್ ಅವರ ಮರಣದ 12 ದಿನಗಳ ನಂತರ ಐತಿಹಾಸಿಕ ಚಿತ್ತೋರ್‌ಗಢ ಕೋಟೆಯಲ್ಲಿ ನಡೆದ ಸಾಂಪ್ರದಾಯಿಕ ಪಟ್ಟಾಭಿಷೇಕ ಸಮಾರಂಭದಲ್ಲಿ ವಿಶ್ವರಾಜ್ ಸಿಂಗ್‌ರನ್ನು ಮೇವಾರ್ ರಾಜವಂಶದ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಪಟ್ಟಾಭಿಷೇಕ ಸಮಾರಂಭದಲ್ಲಿ ಪುರೋಹಿತರು ಪೂಜೆಗಳನ್ನು ಸಲ್ಲಿಸಿ ಹವನವನ್ನು ಮಾಡಿದರು.


