ಬೆಂಗಳೂರು : ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಟಿ ರವಿ ಖಡಕ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ಸಿಟಿ ರವಿ ಭಾಷಣ ಮಾಡುತ್ತ ಲಕ್ಷ್ಮಣ ಸವದಿ ವಿಚಾರ ಮಾತನಾಡಿದ್ರು. ಲಕ್ಷ್ಮಣ ಸವದಿ ಜೊತೆ ಸ್ನೇಹ ಇದೆ. ಅವರು ಪಾರ್ಟಿ ಬಿಟ್ಟರು ಸ್ನೇಹ ಬಿಟ್ಟಿಲ್ಲ. ಅವರು ಪಾರ್ಟಿ ಬಿಡುವಾಗ ಹೇಳಿದ್ದೆ ಬಿಡಬೇಡ ಎಂದು, ಉಪ ಮುಖ್ಯಮಂತ್ರಿ ಆದವ ನೀನು ಬಿಡಬೇಡ ಅಂದಿದ್ದೆ. ಪಶ್ಚಾತ್ತಾಪ ಆದಾಗ, ಕಾಲ ಕೂಡಿ ಬಂದಾಗ ನೋಡೊಣ ಅಂದಿದ್ದಾರೆ.
ಇನ್ನು ಇಂಡಿಯಾ ಒಕ್ಕೂಟ ಕುರಿತು ಮಾತನಾಡಿದ ಸಿಟಿ ರವಿ ಇಂಡಿಯಾ ಒಕ್ಕೂಟ ಎಲ್ಲಿದೆ. ಆ ಒಕ್ಕೂಟದಲ್ಲಿ ಕೇವಲ ಮೋದಿ ಮೇಲೆ ಬೇಸರ ಇದ್ದವರು ಮಾತ್ರ ಇಲ್ಲ ಅವರಲ್ಲಿ ಅವರವರ ಮೇಲೆ ಬೇಸರ ಇರೋರೆ ಒಕ್ಕೂಟದಲ್ಲಿ ಇರೋದು. ಒಬ್ಬರ ಕಂಡರೆ ಒಬ್ಬರಿಗೆ ಆಗೋದಿಲ್ಲ. ಮತ್ತೆ ರಾಘವೇಂದ್ರರನ್ನೆ ಸಂಸದ ಮಾಡಿ ಎಂಬ ಶಾಮನೂರು ಹೇಳಿಕೆ ವಿಚಾರವಾಗಿಯೂ ಸಿಟಿ ರವಿ ಮಾತನಾಡಿದ್ದಾರೆ. ಶಾಮನೂರು ಹೇಳಿಕೆಗೆ ಸ್ವಾಗತ ಮಾಡುತ್ತೇನೆ ಅವರು ಮೋದಿಯನ್ನು ಒಪ್ಪಿದ್ದಾರೆ. ಮತ್ತೆ ಮೋದಿ ಪ್ರಧಾನಿ ಆಗಲಿ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎಂದರು.
ಶಾಮನೂರು ಅವರ ಹೇಳಿಕೆಯಂತೆ ಮೋದಿಗೆ ಎಲ್ಲಾರೂ ಮತ ಹಾಕಬೇಕು ಬಿಜೆಪಿ ಗೆಲ್ಲಿಸಬೇಕು ಆಗಲೇ ದೇಶದ ಅಭಿವೃದ್ದಿ ಸಾಧ್ಯ. ಅಭಿವೃದ್ಧಿ ಆಗಬೇಕು ಎಂದರೆ ಮೋದಿ ಬೇಕಲ್ಲ, ಮೋದಿ ಪ್ರಧಾನಿ ಆಗಬೇಕು ಎಂದರೆ ಮತ ಹಾಕಬೇಕು ಎಂದರು. ಹೀಗಾಗಿ ಬಿಜೆಪಿಗೆ ಮತ ಹಾಕಿ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಿ ಎಂದ ಸಿಟಿ ರವಿ.