ನವದೆಹಲಿ; ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ಕಾಂಗ್ರೆಸ್‌ಗೆ ‘ಪಂಚ್’ ಕೊಟ್ಟಿದೆ. ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಕಂಡಿದೆ. ಈ ಗೆಲುವು ಕಾಂಗ್ರೆಸ್‌ ನಲ್ಲಿ ನಿದ್ದೆಗೆಡಿಸಿದೆ. ಬಿಜೆಪಿಯ ಮಂತ್ರವನ್ನೇ ಕರ್ನಾಟಕದಲ್ಲಿ ತಿರುಗುಮುರುಗಾಗಿ ಪ್ರಯೋಗಿಸಲು ‘ಕೈ’ ಪಡೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೈಕಮಾಂಡ್ ಈ ಬಾರಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕೆಂದು ಹೈಕಮಾಂಡ್ ಕಾಂಗ್ರೆಸ್ ನಾಯಕರಿಗೆ ಹೊಸ ಟಾಸ್ಕ್ ಕೊಟ್ಟಿದೆ. ಇದನ್ನು ಸಾಧಿಸಬೇಕೆಂದರೆ 8 ರಿಂದ 9 ಲೋಕಸಭೆ ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಘಟಕದೊಂದಿಗೆ ಹಂಚಿಕೊಂಡಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬರೀ 1 ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್, ಈ ಬಾರಿ 15ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರಿಂದ ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿದ್ದೆ. ಇದರಿಂದಾಗಿ ಮಂತ್ರಿ ಸ್ಥಾನದಲ್ಲಿರುವ ‘ಬಲಶಾಲಿ’ಗಳಿಗೆ ಟಿಕೆಟ್ ನೀಡಿದರಷ್ಟೇ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಿದೆ ಎಂಬ ಪ್ರಾಥಮಿಕ ಹಂತದ ಚರ್ಚೆಗಳು ದಿಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಗುಸುಗುಸು ನಡಿಯುತ್ತಿದೆ..

ಈ ಬಗ್ಗೆ ಕಾಂಗ್ರೆಸ್‌ ಲೋಕಸಭೆ ಕ್ಷೇತ್ರಗಳ ಪರಿಸ್ಥಿತಿಗಳ ಬಗ್ಗೆ ಆಂತರಿಕ ಸಮೀಕ್ಷೆ ನಡೆಸಿ,ಹಲವು ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂದು ಹೇಳಿದೆ.. ಕೆಲ ಸಚಿವರು ಮಂತ್ರಿಸ್ಥಾನ ಬಿಟ್ಟು ಸಂಸದ ಚುನಾವಣೆಗೆ ಸ್ಪರ್ಧಿಸಲು ಸಚಿವರು ಒಪ್ಪಬಹುದೇ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ಸೂಚಿಸಿದರೆ ಅವರು ಸ್ಪರ್ಧಿಸಲೇಬೇಕಾಗುತ್ತದೆ. ಒಂದು ವೇಳೆ ಚುನಾವಣೆ ಗೆದ್ದರೆ ಅವರಿಂದ ತೆರವಾಗುವ ಶಾಸಕ ಕ್ಷೇತ್ರದಲ್ಲಿ ಸಚಿವರು ಶಿಫಾರಸು ಮಾಡುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ’ ಎಂದು ಪಕ್ಷದ ಮೂಲಗಳು ತಿಳಿಸಿದೆ….

ಪುತ್ರರಿಗೆ ಟಿಕೆಟ್‌ ಕೊಡಿಸಲು ದಿಲ್ಲಿಯಲ್ಲಿ ಸರ್ಕಸ್‌..!

ಹಲವು ಸಚಿವರು ತಮ್ಮ ಮಕ್ಕಳಿಗೆ ಲೋಕಸಭೆ ಟಿಕೆಟ್ ನೀಡುವಂತೆ ದಿಲ್ಲಿ ನಾಯಕರ ಬೆನ್ನು ಬಿದ್ದಿದ್ದಾರೆ. ಆದರೆ, ಈ ನಾಯಕರಷ್ಟು ಅವರ ಕುಟುಂಬಸ್ಥರು ಜನಪ್ರಿಯರಾಗಿಲ್ಲ. ಹೀಗಾಗಿ, ತಮ್ಮ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದರೇ ಸೋಲುವ ಭೀತಿ ಇದೆ. ಇದರಿಂದ ನೀವೇ ಲೋಕ ಸಭಾ ಸ್ಪರ್ಧಿಸಿ ನಿಮ್ಮಿಂದ ತೆರವಾಗುವ ಶಾಸಕ ಕ್ಷೇತ್ರದಲ್ಲಿ ಮಕ್ಕಳು ಅಥವಾ ಕುಟುಂಬಸ್ಥರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರವಿದೆ.

By admin

Leave a Reply

Your email address will not be published. Required fields are marked *

Verified by MonsterInsights